ದ.ಕ. ಜಿಲ್ಲೆಯ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ )ದ ಅಧಿಕಾರಿ ಡಾ.ಪ್ರವೀಣ್ ಕುಮಾರ್, ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಮತ್ತು ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ಅವರಿಗೆ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರ ಹಸ್ತಾಂತರಿಸಿದರು. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್.ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ.ನಾಯಕ್, ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್, ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ, ಸ್ಪೈಸಸ್ ಎನ್ ಶೆಫ್ಸ್ ನಿರ್ದೇಶಕ ಸಚಿನ್ ಮೆಹ್ತಾ, ಘಟಕ ಮುಖ್ಯಸ್ಥ ರಾಜೇಶ್ ಇ.ಟಿ., ಕ್ವಾಲಿಟಿ ಮ್ಯಾನೇಜರ್ ಸೌಪರ್ಣಿಕಾ ಉಪಸ್ಥಿತರಿದ್ದರು.  
ಜಿಲ್ಲೆ

ಎಕ್ಸ್‌ಪರ್ಟ್‌ಗೆ ‘ಈಟ್ ರೈಟ್ ಕ್ಯಾಂಪಸ್’ ಪ್ರಮಾಣಪತ್ರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಗೌರವ

Mangaluru - Shravan Kumar Nala

ಮಂಗಳೂರು: ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ ಆಹಾರ ಒದಗಿಸುತ್ತಿರುವ ಮಂಗಳೂರಿನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಪ್ರತಿಷ್ಠಿತ ‘ಈಟ್ ರೈಟ್ ಕ್ಯಾಂಪಸ್’ ಪ್ರಮಾಣಪತ್ರ ನೀಡಿದೆ. ಈ ಪ್ರಮಾಣಪತ್ರ ಪಡೆದ ಕರ್ನಾಟಕದ ಮೊದಲ ಪದವಿಪೂರ್ವ ಕಾಲೇಜು ಹಾಗೂ ದಕ್ಷಿಣ ಕನ್ನಡದ ಏಕೈಕ ಕ್ಯಾಂಪಸ್ ಎಂಬ ಹೆಗ್ಗಳಿಕೆಯನ್ನು ಎಕ್ಸ್‌ಪರ್ಟ್ ಕಾಲೇಜು ಪಡೆದುಕೊಂಡಿದೆ.

ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ )ದ ಅಧಿಕಾರಿ ಡಾ.ಪ್ರವೀಣ್ ಕುಮಾರ್, ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಮತ್ತು ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.

ಎಕ್ಸ್‌ಪರ್ಟ್ ಕಾಲೇಜಿನ ಆಹಾರ ನಿರ್ವಹಣೆಯನ್ನು ಪ್ರಸಿದ್ಧ ಕ್ಯಾಟರಿಂಗ್ ಸಂಸ್ಥೆ ‘ಸ್ಪೈಸಸ್ ಎನ್ ಶೆಫ್ಸ್’ ಮಾಡುತ್ತಿದೆ. ಆಹಾರ ನಿರ್ವಹಣೆಯಲ್ಲಿ ಕಾಲೇಜಿಗೆ ಐಎಸ್‌ಒ 22000 ಮತ್ತು ಎಫ್‌ಎಸ್‌ಎಸ್‌ಎಐಯಿಂದ ‘ಫೈವ್ ಸ್ಟಾರ್’ ಪ್ರಮಾಣಪತ್ರ ಲಭಿಸಿದೆ. ಇದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗಳ ಆಹಾರದ ಗುಣಮಟ್ಟಕ್ಕೆ ಲಭಿಸಿದ ಅಂಗೀಕಾರವಾಗಿದೆ.

ಕ್ಯಾಂಪಸ್‌ನಲ್ಲಿ ಆಹಾರ ಸುರಕ್ಷತೆಯ ನಿರ್ವಹಣೆ

‘ಈಟ್ ರೈಟ್ ಕ್ಯಾಂಪಸ್’ ಎಂಬುದು ಎಫ್‌ಎಸ್‌ಎಸ್‌ಎಐಯ ‘ಈಟ್ ರೈಟ್ ಇಂಡಿಯಾ’ ಅಭಿಯಾನದ ಉಪಕ್ರಮ. ದೇಶದಲ್ಲಿ ಆರೋಗ್ಯಕರ ಮತ್ತು ಪೂರಕ ಆಹಾರ ಸಂಸ್ಕೃತಿಯ ಪ್ರಚಾರ ಮಾಡುವುದು ಈ ಅಭಿಯಾನದ ಉದ್ದೇಶ ಎಂದು ಡಾ.ಪ್ರವೀಣ್ ಕುಮಾರ್ ತಿಳಿಸಿದರು. ಈ ಅರ್ಹತೆ ಗಳಿಸಬೇಕಾದರೆ ಯಾವುದೇ ಕ್ಯಾಂಪಸ್ ಆಹಾರ ಸುರಕ್ಷತೆಯ ನಿರ್ವಹಣೆ ಅಳವಡಿಸಿಕೊಳ್ಳಬೇಕು. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಗಳ ಆಯ್ಕೆ, ಪೂರಕ ಆಹಾರ ಕ್ರಮ ಉತ್ತೇಜಿಸುವುದು ಹಾಗೂ ಆಹಾರ ಸುರಕ್ಷತೆ ಮತ್ತು ಆರೋಗ್ಯಕರ ಸೇವನೆಯ ಬಗ್ಗೆ ಜಾಗೃತಿ ಹೊಂದಿರಬೇಕು ಎಂದು ವಿವರ ನೀಡಿದರು.