ಜಿಲ್ಲೆ

ಬಾಣಂತಿ ಪೌಷ್ಟಿಕ ಆಹಾರ ಸೇವಿಸಲಿ

ಸವಣೂರ: ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಗಭಿರ್ಣಿ, ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಿಡಿಪಿಒ ಉಮಾ ಕೆ.ಎಸ್​. ಹೇಳಿದರು.

ತಾಲೂಕಿನ ಹುರಳಿಕುಪ್ಪಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಉದ್ಘಾಟಿಸಿ, ಗಭಿರ್ಣಿಯರಿಗೆ ಸೀಮಂತ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.

ಅಂಗನವಾಡಿ ಮೇಲ್ವಿಚಾರಕಿ ಸುಪ್ರಿಯಾ ಗುತ್ತಲ, ಸಮುದಾಯ ಆರೋಗ್ಯ ಅಧಿಕಾರಿ ಎನ್​.ಜಿ. ಕುರುಬರ, ಪೋಷಣ ಅಭಿಯಾನ ಮೇಲ್ವಿಚಾರಕಿ ರೇಷ್ಮಾ ನೀರಲಗಿ, ಗ್ರಾಪಂ ಸದಸ್ಯರಾದ ಗೀತಾ ನಿಂಗನಗೌಡ, ಜಯಮ್ಮ ವೈಯ್ಯಾಳಿ, ಅಂಗನವಾಡಿ ಕಾರ್ಯಕರ್ತೆಯರಾದ ಎಂ.ಬಿ. ಕಟಗಿ, ಪಿ.ಎಸ್​. ಬಸನಗೌಡ, ಜಿ.ಕೆ. ಕುಲಕಣಿರ್, ಜೆ.ಪಿ. ಎಲಿಗಾರ, ನೀಲಮ್ಮ ನಾಗಪ್ಪನವರ, ಚಂಪಾ ಗೌರಿಮಠ, ಪುಷ್ಪ ಗುಡಿಗೇರಿ ಇತರರು ಇದ್ದರು.