ನಾಲತವಾಡ : ಬದಲಾದ ಆಹಾರ ಪದ್ಧತಿಯಿಂದಾಗಿ ಇಂದು ಹಲವಾರು ರೋಗಗಳು ಕಾಡುತ್ತಲಿವೆ. ಇಂಥ ಸಂದರ್ಭದಲ್ಲಿ ಹಿತಮಿತ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವತ್ತ ಚಿತ್ತ ಹರಿಸಬೇಕು ಎಂದು ಹಿರೇಮುರಾಳದ ಸರ್ಕಾರಿ ಆರೋಗ್ಯ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಬಸವರಾಜ ಕಟ್ಟಿ ಹೇಳಿದರು.
ಹಿರೇ ಮುರಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್ಯುರ್ವೇದ ಔಷಧ ಮತ್ತು ಆಹಾರ ಪದ್ಧತಿ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಯಾದ ಆಹಾರ ಸೇವೆನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಯಮಿತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.