ಬಾಳೆಹೊನ್ನೂರಿನ ವಿಜಯಮಾತೆ ಚರ್ಚಿನಲ್ಲಿ ಈಸ್ಟರ್ ಹಬ್ಬವನ್ನು ಧರ್ಮಗುರುಗಳ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳೊಂದಿಗೆ ಆಚರಿಸಲಾಯಿತು. ಧರ್ಮಗುರುಗಳಾದ ಅವಿನ್, ಸ್ಟ್ಯಾನಿ, ಪೌಲ್ ಡಿಸೋಜಾ ಇದ್ದರು.  
ಜಿಲ್ಲೆ

ಬಾಳೆಹೊನ್ನೂರಲ್ಲಿ ಈಸ್ಟರ್ ಹಬ್ಬದ ಸಂಭ್ರಮ

Shivamogga - Desk - Vinayakumar D B

ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚಿನಲ್ಲಿ ಭಾನುವಾರ ಈಸ್ಟರ್ ಹಬ್ಬವನ್ನು (ಏಸುಕ್ರಿಸ್ತರ ಪುನರುತ್ಥಾನ) ಕ್ರೈಸ್ತರು ಸಡಗರದಿಂದ ಆಚರಿಸಲಾಯಿತು. ಧರ್ಮಗುರು ಅವಿನ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಗುರುವಾರ ಏಸುಕ್ರಿಸ್ತರ ಅಂತಿಮ ಭೋಜನ, ಶುಕ್ರವಾರ ಏಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವನ್ನು ಆಚರಿಸಲಾಯಿತು. ಈಸ್ಟರ್ ಅಂಗವಾಗಿ ಭಾನುವಾರ ಈಸ್ಟರ್ ಮೊಟ್ಟೆಗಳನ್ನು ಭಕ್ತರಿಗೆ ವಿತರಿಸಲಾಯಿತು. ಪುನರುತ್ಥಾನದ ಸಂಕೇತವಾಗಿ ಭಕ್ತರಿಗೆ ಧರ್ಮಗುರುಗಳು ಮೊಟ್ಟೆಗಳನ್ನು ವಿತರಿಸಿ ಮೊಟ್ಟೆಯಿಂದ ಒಂದು ಜೀವ ಹೇಗೆ ಹೊರಬರುತ್ತದೆ ಎಂಬುದನ್ನು ತಿಳಿಸಿಕೊಟ್ಟರು. ಆಗಮಿಸಿದ ಭಕ್ತರಿಗೆ ಪವಿತ್ರ ತೀರ್ಥವನ್ನು ಸಿಂಪಡಿಸಿ ಆಶೀರ್ವದಿಸಲಾಯಿತು.
ಧರ್ಮಗುರುಗಳಾದ ಸ್ಟ್ಯಾನಿ ಹಾಗೂ ಪೌಲ್ ಡಿಸೋಜಾ ಇದ್ದರು.