ನಾಪೋಕ್ಲು: ಮೇರಿಮಾತೆಯ ದೇವಾಲಯದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನವನ್ನು ಸಾರುವ ಈಸ್ಟರ್ ಹಬ್ಬವನ್ನು ಭಾನುವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ದೇವಾಲಯದ ಧರ್ಮ ಗುರು ಜ್ಞಾನಪ್ರಕಾಶ್ ಮೇಣದ ಬತ್ತಿಯನ್ನು ಆಶೀರ್ವದಿಸಿ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು (ಉರಿಸಿ)ಪ್ರಜ್ವಲಿಸಿದರು.
ಗುರುಗಳು ಮೇಣದಬತ್ತಿಯನ್ನು ಹಿಡಿದುಕೊಂಡು ಭಕ್ತರ ನಡುವೆ ತೆರಳಿ ಇದು ಕ್ರಿಸ್ತರ ಜ್ಯೋತಿ ಎಂದು ಉದ್ಗರಿಸಿದಾಗ ಎಲ್ಲ ಭಕ್ತರು ದೇವರಿಗೆ ಮಹಿಮೆ ಸಲ್ಲಲಿ ಎಂದು ಜೈಕಾರ ಕೂಗುತ್ತ ತಮ್ಮಲ್ಲಿರುವ ಮೇಣದ ಬತ್ತಿಯನ್ನು ಪ್ರಜ್ವಲಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಲಿ ಪೂಜೆ ನೆರವೇರಿಸಿದರು.
ಪುನರುತ್ಥಾನದ ಯೇಸುವಿನ ಪ್ರತಿಮೆಯನ್ನು ಧರ್ಮ ಗುರುಗಳು ಅನಾವರಣಗೊಳಿಸಿದರು. ಈ ಸಂದರ್ಭ ಪಾಲನಾ ಸಮಿತಿಯ ಸದಸ್ಯರುಗಳು, ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.