ಬೀದರ್: ಹುಮನಾಬಾದ್ ತಾಲೂಕಿನ ಸಿತಾಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಲಘು ಭೂಕಂಪನವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಮೂಲಗಳ ಪ್ರಕಾರ ಸಂಜೆ ರಿಕ್ಟರ್ ಮಾಪಕದಂತೆ ೬.೦೪ರ ಸುಮಾರಿಗೆ ೨.೬ ಪರಿಮಾಣದಲ್ಲಿ ಭೂಮಿ ಕಂಪಿಸಿದೆ. ಹುಮನಾಬಾದ್ ತಾಲೂಕಿನ ತಾಳಮಡಗಿ ಗ್ರಾಪಂ, ಬೀದರ್ ತಾಲೂಕಿನ ರಂಜೋಳಖೇಣಿ ಗ್ರಾಪಂ ವ್ಯಾಪ್ತಿಯ ಸಿರಕಟನಳ್ಳಿ ಸೇರಿ ಕೆಲವೆಡೆ ಭೂಮಿ ಕಂಪಿಸಿದೆ. ಆದರೆ ಯಾವುದೇ ಅವಘಡ ಸಂಭವಿಸಿಲ್ಲ.