ಜಿಲ್ಲೆ

ಭೂಕಂಪನದ ಅನುಭವ: ಎರಡು ಸಲ ಕಂಪಿಸಿದ ಭೂಮಿ, ಬೆಚ್ಚಿ ಬಿದ್ದ ಜನ..!

Webdesk - Ravikanth

ಬೀದರ್: ರಾಜ್ಯದಲ್ಲಿ ಮತ್ತೆ ಮತ್ತೆ ಭೂಕಂಪನ ಸಂಭವಿಸುತ್ತಿದ್ದು, ಇಂದು ಅಂಥದ್ದೇ ಭೂಕಂಪನ ಉಂಟಾಗಿದೆ. ಅದರಲ್ಲೂ ಎರಡು ಸಲ ಭೂಮಿ ಕಂಪಿಸಿದ್ದು, ಸ್ಥಳೀಯ ಜನರು ಬೆಚ್ಚಿಬಿದ್ದು, ಮನೆಯಿಂದ ಹೊರಗೆ ಓಡಿ ಬರುವಂತಾಗಿದೆ.

ಬೀದರನ ಹುಮನಾಬಾದ ತಾಲೂಕಿನ ಹುಣಸನಾಳ ಗ್ರಾಮದಲ್ಲಿ ಇಂದು ಮಧ್ಯಾಹ್ನ ಹಾಗೂ ಸಂಜೆ ಭೂಕಂಪದ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಎರಡು ಸಲ ಭೂಮಿಯಿಂದ ದೊಡ್ಡ ಪ್ರಮಾಣದ ಸದ್ದು ಕೇಳಿಬಂದಿತ್ತು ಎಂದು ಜನರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಮತ್ತೆ ಎಲ್ಲಿ ಪುನಃ ಭೂಕಂಪನ ಉಂಟಾಗುತ್ತದೋ ಎಂಬ ಆತಂಕದಲ್ಲೇ ಜನರಿದ್ದಾರೆ.

ಭೂಕಂಪನದ ಸುದ್ದಿ ಹರಿದಾಡುತ್ತಿದ್ದಂತೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪಿಎಸ್ಐ ರವಿಕುಮಾರ ನಾಯ್ಕೋಡಿ, ಡಾ। ಗೋವಿಂದ್ ಸೇರಿ ಭೂಗರ್ಭ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಳೆ ಬೆಳಗ್ಗೆ ನುರಿತ ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ ಎನ್ನಲಾಗುತ್ತಿದೆ.