ನೇಸರಗಿ: ಮುಂಗಾರು ಹಂಗಾಮಿನಲ್ಲಿ ಸೋಯಾಬೀನ್, ಮೆಕ್ಕೆಜೋಳ, ಹೆಸರು, ಉದ್ದಿನ ಬೀಜಗಳನ್ನು ವಿತರಿಸಲಾಗುತ್ತಿದ್ದು, ಭೂಮಿ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕೆಂದು ನೇಸರಗಿ ರೈತ ಸಂಪರ್ಕ ಕೇಂದ್ರದ ಹಿರಿಯ ಕೃಷಿ ಅಧಿಕಾರಿ ಆರ್.ಐ.ಕುಂಬಾರ ಹೇಳಿದರು.
ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಈಚೆಗೆ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸುತ್ತಿದ್ದು, ಭೂಮಿ ಹದ ಮಾಡಿ ಬೀಜೋಪಚಾರದೊಂದಿಗೆ ಬಿತ್ತನೆ ಮಾಡಬೇಕೆಂದರು.
ಪಿಕೆಪಿಎಸ್ ನಿರ್ದೇಶಕರಾದ ವಿರೂಪಾಕ್ಷಪ್ಪ ಚೋಬಾರಿ, ಮಲ್ಲೇಶಪ್ಪ ಮಾಳಣ್ಣವರ, ಶಂಕರ ತಿಗಡಿ, ಎಸ್.ಎಂ. ಪಾಟೀಲ, ಸುರೇಶ ಕಂಡ್ರಿ, ಪ್ರಕಾಶ ತೋಟಗಿ, ಕೀರಪ್ಪ ಸೋಮಣ್ಣವರ, ಸಿದ್ದಪ್ಪ ತುಳಜನ್ನವರ, ಸಾವಿತ್ರಿ ಕೋಲಕಾರ, ಗಂಗಪ್ಪ ಕಾಡಣ್ಣವರ, ಯುವ ಮುಖಂಡ ಸಚಿನ ಪಾಟೀಲ, ಎಂ.ಟಿ.ಪಾಟೀಲ, ಎ.ಆರ್.ಮಾಳಣ್ಣವರ, ಕೆಂಚಪ್ಪ ಕಳ್ಳಿಬಡ್ಡಿ, ಮಾಜಿ ಎಪಿಎಂಸಿ ಅಧ್ಯಕ್ಷ ಭರಮಪ್ಪ ಸತ್ಯಣ್ಣವರ,ಶೇಖರ ಕಾರಜೋಳ, ನಿಂಗಪ್ಪ ತಳವಾರ, ಮಕಬುಲ್ ಬೇಪಾರಿ, ಕಾರ್ಯದರ್ಶಿ ವಿಶ್ವನಾಥ ಕೂಲಿನವರ ಇತರರಿದ್ದರು.