ಪಡುಬಿದ್ರಿ: ಊರಿನಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಎಲ್ಲರೂ ಸಂಘಟಿತರಾಗಿ ಶ್ರದ್ಧಾಭಕ್ತಿಯಿಂದ ಮಾಡುತ್ತಿರುವುದು ಅವಿಭಜಿತ ದ.ಕ. ಜಿಲ್ಲೆಯ ಮಣ್ಣಿನ ಗುಣ. ಸಾಕಷ್ಟು ದೈವಸ್ಥಾನ ದೇವಸ್ಥಾನಗಳಿರುವ ನಮ್ಮಲ್ಲಿ ನಿತ್ಯ ನಿರಂತರವೆಂಬಂತೆ ಬ್ರಹ್ಮಕಲಶೋತ್ಸವ ನಡೆಯುತ್ತಿರುತ್ತವೆ. ಹೊಸ ದೇವಸ್ಥಾನ ನಿರ್ಮಾಣಕ್ಕಿಂತ ಪುರಾತನ ದೈವಸ್ಥಾನ ದೇವಸ್ಥಾನ ಜೀರ್ಣೋದ್ಧಾರದಿಂದ ಪುಣ್ಯ ಸಂಪಾದನೆಯಾಗುತ್ತದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಸಾಂತೂರು ಶ್ರೀ ಆಲ್ ಉರಿನಾಗಬ್ರಹ್ಮಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಗರ್ಭಗೃಹದಲ್ಲಿ ಬ್ರಹ್ಮ, ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಸಾನ್ನಿಧ್ಯಗಳ ಬ್ರಹ್ಮಕಲಶಾಭಿಷೇಕ ಅಂಗವಾಗಿ ಸೋಮವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರಧಾನ ಅರ್ಚಕ ರಘುಪತಿ ಜೋಯಿಸ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಂಗಡಿಗುತ್ತು ಪ್ರಸಾದ್ ಎಂ.ಶೆಟ್ಟಿ, ರಾಜೇಂದ್ರ ಶೆಟ್ಟಿ, ಸದಾಶಿವ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುದರಂಗಡಿ ಚರ್ಚ್ ಧರ್ಮಗುರು ಫೆಡ್ರಿಕ್ ಡಿಸೋಜ, ಮುದರಂಗಡಿ ಗ್ರಾಪಂ ಅಧ್ಯಕ್ಷೆ ನಮಿತಾ, ಅದಾನಿ ಸಮೂಹ ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ, ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಶ್ರೀ ಆಲ್ ಉರಿನಾಗಬ್ರಹ್ಮಸ್ಥಾನ ಆನುವಂಶಿಕ ಮೊಕ್ತೇಸರ ಸಾಂತೂರು ಹೊಸಮನೆ ತಾರಾನಾಥ ಎಸ್.ಶೆಟ್ಟಿ, ಮೋಹನ್ ಶೆಟ್ಟಿ ಕಂಕಣಗುತ್ತು ಪಿಲಾರು, ಶಿವರಾಮ ಶೆಟ್ಟಿ ಕುಂದಬೆಟ್ಟುಗುತ್ತು, ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಳ ಆಡಳಿತ ಮೊಕ್ತೇಸರ ಸುನಿಲ್ ಜಯರಾಮ ಶೆಟ್ಟಿ, ಬೆಳಗಾವಿ ಮತ್ತು ಪಡುಬಿದ್ರಿ ಬಂಟರ ಸಂಘ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ರಮೇಶ್ ಎನ್.ಶೆಟ್ಟಿ ಸಾಂತೂರು ಹೊಸಮನೆ, ಶೇಖರ ಡಿ.ಶೆಟ್ಟಿ, ಸಾಂತೂರು ಹೊಸವಕ್ಲು ಸುನಿಲ್‌ರಾಜ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಸುಜಿತ್ ಕೆ.ಶೆಟ್ಟಿ, ಶಶಿಕುಮಾರ್ ಬಿ.ಶೆಟ್ಟಿ, ಪಡುಬಿದ್ರಿ ಬಂಟರ ಸಂಘ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ರಘುಪತಿ ಜೋಯಿಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಣಾಕ್ಷ ಶೆಟ್ಟಿ ಸ್ವಾಗತಿಸಿದರು. ಸಾಯಿನಾಥ್ ಎಂ.ಶೆಟ್ಟಿ, ದೇವಿಪ್ರಸಾದ್ ಬೆಳ್ಳಿಬೆಟ್ಟು, ಸುಧಾಕರ್ ಶೆಣೈ ಪಿಲಾರು ನಿರೂಪಿಸಿದರು. ಶರತ್ ಶೆಟ್ಟಿ ಸಾಂತೂರು ವಂದಿಸಿದರು.