Earn people's trust instead of property  
ಜಿಲ್ಲೆ

ಆಸ್ತಿ ಬದಲು ಜನರ ವಿಶ್ವಾಸ ಗಳಿಸಿ

Vijayapura - Desk - Doddanagouda Gudihindin

ತೇರದಾಳ(ಗ್ರಾ): ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ತೇರದಾಳ ತಾಲೂಕು ಉಸ್ತುವಾರಿ ಕಾರ್ಯದರ್ಶಿ ಬಾಳಪ್ಪ ಹಂದಿಗುಂದ ಹೇಳಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸೌಲಭ್ಯ ಹಾಗೂ ನೂತನ ತಾಲೂಕಿನ ಅಭಿವೃದ್ಧಿ ಕುರಿತಂತೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜನಸಾಮಾನ್ಯರೊಂದಿಗೆ ಸೌಜನ್ಯಯುತವಾಗಿ ವರ್ತಿಸಿದರೆ ಅವರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತಾರೆ. ಹೆಚ್ಚು ಆಸ್ತಿ ಗಳಿಸುವುದರ ಬದಲು ಜನರ ವಿಶ್ವಾಸ ಗಳಿಸಬೇಕು ಎಂದರು.

ಈಗಾಗಲೇ ತೇರದಾಳ ಕಚೇರಿಗೆ 12 ಜನ ಸಿಬ್ಬಂದಿ ನೇಮಕವಾಗಿದೆ. ಪ್ರಜಾಸೌಧ ನಿರ್ಮಿಸಲು ಜಮೀನು ಮಂಜೂರು, ತಾಲೂಕು ಕಚೇರಿ ದುರಸ್ತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಮತ್ತಿತರರಿದ್ದರು. ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಇದ್ದರು.