ಜಿಲ್ಲೆ

ಕಿವಿ ತಪಾಸಣೆ ಉಚಿತ ಶಿಬಿರ 23ರಂದು

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಮಹಾಂತಶೆಟ್ಟಿ ಆಸ್ಪತ್ರೆಯಲ್ಲಿ ಫೆ.23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರ ವರೆಗೆ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸ್ಥಳೀಯ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಕಿವಿ, ಮೂಗು ಹಾಗೂ ಗಂಟಲು ತಪಾಸಣೆ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮಕ್ಕಳಲ್ಲಿನ ಕಿವುಡತನ ತಪಾಸಣೆ, ಕಾಕ್ಲಿಯರ್ ಇಂಪ್ಯಾಂಟ್ ಹೆಸರು ನೋಂದಾಯಿಸುವಿಕೆ, ಗಂಟಲು, ಕಿವಿ ಹಾಗೂ ಮೂಗಿನ ಸಮಸ್ಯೆ ಇರುವವರಿಗೆ ತಪಾಸಣೆಗೊಳಪಡಿಸಿ ಸಲಹೆ ನೀಡುತ್ತಾರೆ. ಅಸಮತೋಲನ, ಹಿರಿಯರಲ್ಲಿ ಕಿವಿ ಕೇಳದಿರುವುದು, ಕಿವಿ ಕೇಳುವ ಯಂತ್ರದ ಕುರಿತು ಸಲಹೆ, ಮಾತನಾಡಲು ಸಮಸ್ಯೆ ಇರುವವರಿಗೂ ತಪಾಸಣೆ ಇರಲಿದೆ.ಅಗತ್ಯವಿರುವವರಿಗೆ ಉಚಿತ ಆಡಿಯೋಮೆಟ್ರಿ ಮಾಡಲಾಗುವುದು. ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ಮಾಡಲಿದ್ದಾರೆ.

ಜನರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ರೋಟರಿ ಘಟಕದ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ, ಮಾಜಿ ಅಧ್ಯಕ್ಷ ಮಹೇಶ ಬೆಲ್ಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880704702, 9886406169 ಸಂಪರ್ಕಿಸಬಹುದಾಗಿದೆ.