ಹೊಸಕೋಟೆಯಲ್ಲಿ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಇ&ಸ್ವತ್ತು, ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಶಾಸಕ ಶರತ್​ ಬಚ್ಚೇಗೌಡ ಪರಿಶೀಲಿಸಿದರು. ಬಿ.ವಿ.ಬೈರೇಗೌಡ, ಕೇಶವ ಮೂರ್ತಿ, ಅನುರಾಧಾ, ಡಾ.ಸಿ.ಎನ್​. ನಾರಾಯಣಸ್ವಾಮಿ ಇದ್ದರು. 
ಜಿಲ್ಲೆ

ಇಂದು ಇ-ಸ್ವತ್ತು, ಹಕ್ಕುಪತ್ರ ವಿತರಣೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸಕೋಟೆ : ನಗರದ ಚನ್ನಬೈರೇಗೌಡ ಕ್ರೀಡಾಗಣದಲ್ಲಿ ಜು.20ರಂದು ಬೆಳಗ್ಗೆ 10.30ಕ್ಕೆ ತಾಲೂಕು ಪಂಚಾಯಿತಿ ಹಾಗೂ ತಾಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ಇ&ಸ್ವತ್ತು ಮತ್ತು ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಸಕ ಶರತ್​ ಬಚ್ಚೇಗೌಡ ಕಾರ್ಯಕ್ರಮದ ಪೂರ್ವ ಸಿದ್ಧತೆ ಪರಿಶೀಲಿಸಿದರು.

ಶಾಸಕ ಶರತ್​ ಬಚ್ಚೇಗೌಡರ ಅಧ್ಯಕ್ಷತೆ ವಹಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ, ಗ್ರಾಮೀಣ ಮತ್ತು ಪಂಚಾಯತ್​ ರಾಜ್​ ಹಾಗೂ ಐಟಿಬಿಟಿ ಇಲಾಖೆ ಸಚಿವ ಪ್ರಿಯಂಕ ರ್ಖಗೆ, ವಸತಿ ಸಚಿವ ಜಮೀರ್​ ಅಹ್ಮದ್​ ಭಾಗಿಯಾಗಲಿದ್ದಾರೆ. 6700 ಇ&ಸ್ವತ್ತು ಹಾಗೂ 1035 ಹಕ್ಕು ಪತ್ರಗಳನ್ನು ವಿತರಿಸಲಾಗುವುದು.

ಕಾಂಗ್ರೆಸ್​ ಅಧ್ಯಕ್ಷ ಬಿ.ವಿ.ಬೈರೇಗೌಡ, ಯೋಜನಾಪ್ರಾಧಿಕಾರದ ಅದ್ಯಕ್ಷ ಕೇಶವ ಮೂರ್ತಿ, ಜಿಪಂ ಸಿಇಒ ಅನುರಾಧಾ, ತಾಪಂಇಒ ಡಾ.ಸಿ.ಎನ್​.ನಾರಾಯಣಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ್​, ಡಿವೈಎಸ್​ಪಿ ಮಲ್ಲೇಶ್​, ಪೊಲೀಸ್​ ನಿರೀಕ್ಷಕ ಬಿ.ಟಿ.ಗೋವಿಂದ್​, ಮಾಜಿ ಯೋಜನಾ ಪ್ರಾಧಿಕಾರದ ಅದ್ಯಕ್ಷ ಡಾ.ಸಿ.ಜಯರಾಜ್​, ಸಧಾನಂದ್​ ಇದ್ದರು.