ಕಾರವಾರ: ಕಂದಾಯ ಇಲಾಖೆಯಲ್ಲಿ ಈಗಾಗಲೇ ಪ್ರಾರಂಭವಾದಂತೆ ಗ್ರಾಪಂಗಳಲ್ಲೂ ಇ-ಆಫೀಸ್ ವ್ಯವಸ್ಥೆಯನ್ನು ಜಾರಿಗೆ ತರಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ. ಜಿಲ್ಲೆಯ 125 ಗ್ರಾಪಂಗಳು ಇ- ಆಫೀಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡು, ಅರ್ಜಿಗಳ ವಿಲೇವಾರಿ ಪ್ರಾರಂಭಿಸಿವೆ.
ಕರ್ನಾಟಕ ಸರ್ಕಾರವು ಆಡಳಿತವನ್ನು ಸುಧಾರಿಸಲು, ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ಒದಗಿಸಲು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು 2021 ರಿಂದಲೇ ಇ-ಗವರ್ನೆನ್ಸ್ ವ್ಯವಸ್ಥೆ ಜಾರಿಗೆ ತಂದಿದೆ. ಕೆಳ ಹಂತದ ಕಚೇರಿಗಳಲ್ಲಿ ಹಂತ, ಹಂತವಾಗಿ ಕಡತಗಳನ್ನು, ದಾಖಲೆಗಳನ್ನು ಆನ್‌ಲೈನ್‌ಗೆ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಿವಿಧ ಇಲಾಖೆಗಳಿಗೆ ಸಂಬAಽಸಿದAತೆ ವೆಬ್ ಪೋರ್ಟಲ್‌ಗಳನ್ನು ತೆರೆಯಲಾಗಿದೆ. ಅದರ ಭಾಗವಾಗಿ ಎಲ್ಲ ತಹಸೀಲ್ದಾರ್ ಕಚೇರಿಗಳು, ನಾಡ ಕಚೇರಿಗಳಲ್ಲಿ ಈಗಾಗಲೇ ಈ ಆಫೀಸ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಜಿಪಂ, ತಾಲೂಕು ಪಂಚಾಯಿತಿಗಳು ಹಾಗೂ 427 ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿಗೆ ತರಲಾಗಿತ್ತು.
ಈಗ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಮೇ 26 ರಿಂದ ಸಂಪೂರ್ಣ ಇ-ಆಫೀಸ್ ವ್ಯವಸ್ಥೆ ಜಾರಿ ಮಾಡುವಂತೆ ಜಿಪಂ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿತ್ತು. ಅದರಂತೆ ಜಿಪಂ ಕಾರ್ಯ ಪ್ರವೃತ್ತವಾಗಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ 229 ಗ್ರಾಪಂಗಳಲ್ಲಿ 125 ಗ್ರಾಪಂಗಳಲ್ಲಿ ಈ ಆಫೀಸ್ ವ್ಯವಸ್ಥೆ ಜಾರಿಗೆ ಬಂದಿದೆ. 19 ಕಡತಗಳನ್ನು ಈಗಾಗಲೇ ಇ-ಆಫೀಸ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. 279 ಇ-ರಿಸಿಟ್‌ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಶಾಖೆ ಮಾಹಿತಿ ನೀಡಿದೆ.
ಏನಿದು ಇ-ಆಫೀಸ್ ವ್ಯವಸ್ಥೆ..?
ಸಾರ್ವಜನಿರು ನೀಡಿದ ಅರ್ಜಿಗಳನ್ನು, ಅದರ ಜತೆ ನೀಡಿದ ದಾಖಲೆಗಳನ್ನು ಮೊದಲು ಸ್ಕಾ÷್ಯನ್ ಮಾಡಿ, ಅದಕ್ಕೆ ಒಂದು ಕಡತ ಸಂಖ್ಯೆ ನೀಡಿ, ಆನ್‌ಲೈನ್‌ನಲ್ಲಿ ಅಳವಡಿಸಲಾಗುತ್ತತೆ ನಂತರ ನಿಗದಿತ ಅವಽಯಲ್ಲಿ ಕಡತ ವಿಲೇವಾರಿ ಮಾಡಿ ಅಥವಾ ಅದನ್ನು ತಿರಸ್ಕಾರ ಮಾಡಿದ ಬಗ್ಗೆ ಪ್ರತಿಕ್ರಿಯೆಯನ್ನು ಇ-ಆಫೀಸ್ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡಬೇಕಿದೆ. ಈಗಾಗಲೇ ಗ್ರಾಪಂಗಳಲ್ಲಿ ಕರ ವಸೂಲಿಗೆ ಆನ್‌ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಪಿಒಎಸ್ ಯಂತ್ರಗಳನ್ನು ನೀಡಲಾಗಿದೆ. ಜನನ, ಮರಣ ನೋಂದಣಿ, ಇ-ಜನ್ಮ ತಂತ್ರಾAಶದ ಮೂಲಕ ನಡೆಯುತ್ತಿದೆ. ಗ್ರಾಪಂನ ಎಲ್ಲ ಸೇವೆಗಳು, ಆಸ್ತಿಗಳ ವಿವರಗಳು ಪಂಚಮಿತ್ರ ತಂತ್ರಾಂಶದಲ್ಲಿ ಅಳವಡಿಕೆಯಾಗಿವೆ. ಇ-ಆಫೀಸ್ ವ್ಯವಸ್ಥೆಯೂ ಜಾರಿಗೆ ಬಂದರೆ ಗ್ರಾಪಂಗಳು ಸಂಪೂರ್ಣ ಪೇಪರ್ ರಹಿತವಾಗಿರಲಿವೆ.
ತಾವ ತಾಲೂಕಿನಲ್ಲಿ ಎಷ್ಟು ಗ್ರಾಪಂ ..? ತಾಲೂಕುಗಳು ಗ್ರಾಪಂಗಳ ಸಂಖ್ಯೆ ಇ-ಆಫೀಸ್ ಅಳವಡಿಸಿಕೊಂಡ ಗ್ರಾಪಂಗಳ ಸಂಖ್ಯೆ ಸಿದ್ದಾಪುರ 23 15 ಅಂಕೋಲಾ 21 09 ದಾಂಡೇಲಿ 04 04 ಜೊಯಿಡಾ 16 09 ಭಟ್ಕಳ 16 06 ಹೊನ್ನಾವರ 26 14 ಶಿರಸಿ 32 06 ಮುಂಡಗೋಡ 16 03 ಯಲ್ಲಾಪುರ 15 12 ಹಳಿಯಾಳ 20 18 ಕುಮಟಾ 22 18 ಕಾರವಾರ 18 11
ಜಿಲ್ಲೆಯ ಗ್ರಾಪಂಗಳಲ್ಲಿ ಆನ್‌ಲೈನ್ ವ್ಯವಸ್ಥೆಯಲ್ಲಿ ತೆರಿಗೆ ಆಕರಿಸಲು 40 ಪಿಒಎಸ್ ಯಂತ್ರಗಳ ಕೊರತೆ ಇತ್ತು. ಈಗಾಗಲೇ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳಿಸಲಾಗಿದ್ದು, ಹೊಸ ಯಂತ್ರಗಳು ಮಂಜೂರಾಗಿವೆ. ಇ-ಆಫೀಸ್ ಜಾರಿಯಲ್ಲೂ ಉತ್ತರ ಕನ್ನಡ ರಾಜ್ಯದಲ್ಲಿ ಮುಂದಿದೆ. ಪ್ರಕಾಶ ಹಾಲಮ್ಮಕನವರ್ ಉಕ ಜಿಪಂ ಉಪ ಕಾರ್ಯದರ್ಶಿ (ಆಡಳಿತ)