ಬಿ.ಮಲ್ಲಿಕಾರ್ಜುನ 
ಜಿಲ್ಲೆ

ಪಾರದರ್ಶಕ ಆಡಳಿತಕ್ಕಾಗಿ ಇ-ಕಚೇರಿ

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಸೆ.1ರಿಂದ ಪುರಸಭೆಯಲ್ಲಿ ಇ-ಕಚೇರಿ ಆರಂಭಗೊಳ್ಳಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪುರಸಭೆಯಲ್ಲಿ ಇ-ಕಚೇರಿ ಆರಂಭಿಸಲಾಗುತ್ತಿದೆ. ಕಾಗದ ರಹಿತ ಕೆಲಸಕ್ಕೆ ಪ್ರೇರೇಪಿಸಲು ರಾಷ್ಟ್ರೀಯ ಇ-ಆಡಳಿತ ಕಾರ್ಯಕ್ರಮದಲ್ಲಿ ಇ-ಕಚೇರಿ ವ್ಯವಸ್ಥೆ ರೂಪಿಸಲಾಗಿದೆ. ಸಿಬ್ಬಂದಿ ಸಕಾಲದಲ್ಲಿ ಪಾರದರ್ಶಕ, ನೈತಿಕತೆಯಿಂದ ಕೆಲಸ ನಿರ್ವಹಿಸಲು ಅನುಕೂಲವಾಗುತ್ತದೆ. ಕಡತಗಳ ತ್ವರಿತ ವಿಲೇವಾರಿ ಹಾಗೂ ಸರಿಯಾಗಿ ಕೆಲಸ ನಿರ್ವಹಿಸದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಂದಾಯ ಅಧಿಕಾರಿ ಪ್ರಶಾಂತ್ ಚಿತ್ರಗಾರ್ ಮಾತನಾಡಿ, ಬಾಡಿಗೆದಾರರು ಆಸ್ತಿ, ನೀರಿನ ಕರ, ಮಳಿಗೆ ಬಾಡಿಗೆಯನ್ನು ಸಕಾಲದಲ್ಲಿ ಪಾವತಿಸಿ ದಂಡ ಹಾಗೂ ಬಡ್ಡಿಯಿಂದ ಮುಕ್ತರಾಗಿ. ಕಚೇರಿ ಸಿಬ್ಬಂದಿ ವಸೂಲಿಗಾಗಿ ಮನೆ ಬಾಗಿಲಿಗೆ ಬಂದಾಗ ಕರ ಪಾವತಿಸಿ ರಶೀದಿ ಪಡೆದುಕೊಳ್ಳಬೇಕು. ಕರ ವಸೂಲಾತಿ ವೇಳೆ ಸಿಬ್ಬಂದಿಗೆ ಸಹಕರಿಸಿ ಎಂದರು.