ಬೆಳಗಾವಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವು ನೇರವಾಗಿ ಲಾನುಭವಿ ಬ್ಯಾಂಕ್ ಖಾತೆಗೆ ಜಮೆ ಆಗುವುದಕ್ಕೆ ಅಗತ್ಯವಿರುವ ಇ-ಕೆವೈಸಿ ನೋಂದಣಿ ಮಾಡಿಸುವಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ.
ಎರಡು ಲಕ್ಷ ಲಾನುಭವಿಗಳು ಇರುವ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಶೇ.50 ಮಾತ್ರ ಇ-ಕೆವೈಸಿ ಮಾಡಿಸಲಾಗಿದೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ 5.76 ಲಕ್ಷ ಲಾನುಭವಿಗಳಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆ ಇದ್ದರೂ ಅಕಾರಿಗಳು 5.20 ಲಾನುಭವಿಗಳ ಇ-ಕೆವೈಸಿ ಮಾಡಿದ್ದು, ಶೇ.92ಕ್ಕೂ ಅಕ ಸಾಧನೆಯಾಗಿದೆ.
‘ಇ- ಆಡಳಿತದ ಆಡಿಯೋ ಆ್ಯಪ್’ ಮೂಲಕ ಹೆಚ್ಚಿನ ಸಂಖ್ಯೆಯ ಲಾನುಭವಿಗಳನ್ನು ಇ-ಕೆವೈಸಿ ಮಾಡಿಸುವಲ್ಲಿ ಅಕಾರಿಗಳು ಯಶ ಕಂಡಿದ್ದಾರೆ. ಏಕಕಾಲಕ್ಕೆ 15 ಸಾವಿರ ಜನರೊಂದಿಗೆ ಮಾತನಾಡುವ ರೀತಿಯಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಅಕಾರಿಗಳು ಒಂದೇ ದಿನ ಆ್ಯಪ್ ಸಹಾಯದಿಂದ 1.35 ಲಕ್ಷ ರೈತರೊಂದಿಗೆ ನೇರವಾಗಿ ಸಂವಹನ ಸಾಸಿ ಇ-ಕೆವೈಸಿ ಹೇಗೆ ಮಾಡಿಸುವುದು ಎಂದು ತಿಳಿಸಿದ್ದಾರೆ. ಮೊಬೈಲ್ ಅಥವಾ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್‌ನಲ್ಲಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ರೈತರು ‘0’ ಬಟನ್ ಒತ್ತಿ ಪ್ರಶ್ನೆ ಕೇಳಿ ಸಂದೇಹ ಬಗೆಹರಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇ-ಕೆವೈಸಿ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ಅಕಾರಿಗಳು ಗ್ರಾಮಗಳಲ್ಲಿ ಡಂಗುರವನ್ನೂ ಸಾರಿದ್ದಾರೆ. ಲಾನುಭವಿಗಳು ನಿಧನ ಹೊಂದಿದರೂ ಆ ಖಾತೆಗೆ ಹಣ ಜಮೆ ಆಗುವುದನ್ನು ತಡೆಯಲಾಗುತ್ತಿದೆ.
ಪಿಎಂ ಕಿಸಾನ್ ಸಮ್ಮಾನ್ ನಿ ಪಡೆಯಲು ರೈತರೇ ತಮ್ಮ ಮೊಬೈಲ್‌ಗಳಲ್ಲಿ ಇ-ಕೆವೈಸಿ ನೋಂದಾಯಿಸಬಹುದು. ಮೊಬೈಲ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಪಿಎಂ ಕಿಸಾನ್ ಇಕೆವೈಸಿ ಎಂದು ಟೈಪ್ ಮಾಡಿ ಅದರ ತಳಭಾಗದಲ್ಲಿ ಕಾಣುವ ಟು ಒಟಿಪಿ ಬೇಸ್ಡ್ ಇ-ಕೆವೈಸಿ ಕ್ಲಿಕ್ ಮಾಡಿದರೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೇಳಿರುವ ಬಾಕ್ಸ್‌ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಎಂದು ತೋರಿಸುತ್ತೆ. ಅಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಿದರೆ ಆಗ ಆಧಾರ್ ಸಂಖ್ಯೆಗೆ ನೀಡಿರುವ ಮೊಬೈಲ್ ಸಂಖ್ಯೆ ಕೇಳುತ್ತದೆ. ಮೊಬೈಲ್ ಸಂಖ್ಯೆ ನಮೂದಿಸಿದ ಮೇಲೆ ಗೆಟ್ ಮೊಬೈಲ್ ಒಟಿಪಿ ಎಂದು ಕ್ಲಿಕ್ ಮಾಡಿದ ಮೇಲೆ ಮೊಬೈಲ್‌ಗೆ ನಾಲ್ಕು ಅಂಕಿಯ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್‌ಮೀಟ್ ಒಟಿಪಿ ಎಂದು ಕ್ಲಿಕ್ ಮಾಡಿದರೆ ಆರು ಸಂಖ್ಯೆಯ ಒಟಿಪಿ ಬರುತ್ತದೆ. ಅದನ್ನು ಅಲ್ಲಿರುವ ಬಾಕ್ಸ್‌ನಲ್ಲಿ ಟೈಪ್ ಮಾಡಿ ಸಬ್‌ಮೀಟ್ ಮಾಡಿದರೆ ಇ-ಕೆವೈಸಿ ಡನ್ ಸಕ್ಸಸ್‌ುಲ್ ಎಂದು ಬರುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ ಮೂರು ಕಂತಿನಂತೆ 6 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ. ಇ-ಕೆವೈಸಿ ಮಾಡಿಸಿದ ಲಾನುಭವಿ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಇ-ಕೆವೈಸಿ ಮಾಡಿಸದಿದ್ದರೆ ಮುಂದಿನ ಕಂತು ಬ್ಯಾಂಕ್‌ಗೆ ಜಮೆ ಆಗುವುದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 50 ಸಾವಿರ ಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಬಾಕಿ ಇವೆ. ‘ಇ- ಆಡಳಿತದ ಆಡಿಯೋ ಆ್ಯಪ್’ ಮೂಲಕ ಅಕಾರಿಗಳು ಮಾರ್ಗದರ್ಶನ ನೀಡಿದ ಆಧಾರದಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷ ರೈತರು ಸ್ವತಃ ಮೊಬೈಲ್‌ನಲ್ಲಿ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ.
ಪಿಎಂ ಕೃಷಿ ಸಮ್ಮಾನ್ ಯೋಜನೆಯ ಹಣ ಲಾನುಭವಿ ಖಾತೆಗೆ ಜಮೆಯಾಗಬೇಕೆಂದರೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲೇಬೇಕು. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಇ-ಕೆವೈಸಿ, ಮಾಡಿಸುವುದರಲ್ಲಿ ಅಕಾರಿಗಳು ತೊಡಗಿದ್ದಾರೆ. ಲಾನುಭವಿಗಳು ಮುಂದಿನ ಕಂತು ಪಡೆಯಬೇಕೆಂದರೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು.| ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ
| ಜಗದೀಶ ಹೊಂಬಳಿ ಬೆಳಗಾವಿ