ರಾಮನಗರ: ನಗರಸಭೆಯಿಂದ ಮನೆ ಮನೆಗೆ ಇ&ಖಾತಾ ಆಂದೋಲನದ ಅಂಗವಾಗಿ ಬುಧವಾರ ವಾರ್ಡ್ ನಂ.1 ಮತ್ತು 2ಕ್ಕೆ ಸಂಬಂಧಿಸಿದಂತೆ ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸಮ್ಮುಖದಲ್ಲಿ ಅಭಿಯಾನ ನಡೆಯಿತು.
ನಗರಸಭೆ ಪೌರಾಯುಕ್ತರು, ಕಂದಾಯ ಶಾಖೆ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ದಾಖಲಾತಿ ಸರಿಯಿದ್ದವರಿಗೆ ಸ್ಥಳದಲ್ಲಿಯೇ ಇ&ಖಾತೆ ಸೃಜನೆ ಮಾಡಿದರು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದ 18 ಸ್ವತಿನ ಮಾಲೀಕರು ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಒಂದು ಗಂಟೆಯೊಳಗೆ ಇ&ಖಾತೆ ಪಡೆದುಕೊಂಡರು.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಅವರ ನಿಮ್ಮ&ಆಸ್ತಿ, ನಿಮ್ಮ&ಹಕ್ಕು ಎಂಬ ೂಷವಾಕ್ಯದೊಡನೆ ಮನೆ ಅಂಗಳದಲ್ಲಿ ಇ&ಖಾತಾ ಸೌಲಭ್ಯ ಒದಗಿಸುವ ವಿನೂತನ ಪ್ರಯತ್ನಕ್ಕೆ ಮೊದಲ ದಿನದಂತೆ ಸಾರ್ವಜನಿಕರು ಅಭಿಯಾನದಲ್ಲಿ ಭಾವಹಿಸಿ ನಗರಸಭೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವತಿನ ಮಾಲೀಕರಿಗೆ ಇ&ಖಾತೆ ವಿತರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ, ಇ&ಖಾತಾ ಆಂದೋಲನದಲ್ಲಿ ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಇ&ಖಾತೆಗಳನ್ನು ವಿತರಣೆ ಮಾಡಿದ್ದರೂ ಸಮಾಧಾನ ತಂದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ನಿಮ್ಮಆಸ್ತಿ&ನಿಮ್ಮ ಹಕ್ಕು ಅಡಿಯಲ್ಲಿ ಸ್ವಂತ ಆಸ್ತಿಯನ್ನು ಇ&ಖಾತಾ ಮಾಡಿಸಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಇ&ಖಾತೆಗೆ ಅವಕಾಶ ಮಾಡಿಕೊಟ್ಟಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ಅರ್ಜಿ ಸಲ್ಲಿಸುವ ಎಲ್ಲರಿಗೂ ಇ&ಖಾತೆ ಸೃಜಿಸಿ ಕೊಡಲಾಗುವುದು. ಈ ಮೊದಲು ಇ&ಖಾತೆ ಪಡೆಯಲು ತಿಂಗಳು, ವರ್ಷಗಟ್ಟಲೇ ಕಚೇರಿಗೆ ಅಲೆದಾಟ ನಡೆಸಬೇಕಿತ್ತು. ನಾವು ಇದರ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಈ ಭಾಗದಲ್ಲಿ ಕೆಲವರು ಇ&ಖಾತೆ ಮಾಡಿಕೊಂಡಿದ್ದರೂ ಉಳಿದವರು ಹಂತ & ಹಂತವಾಗಿ ಮಾಡಿಸಿಕೊಳ್ಳಬೇಕು. ಈ ಬಗ್ಗೆ ನಗರದಾದ್ಯಂತ ಕರಪತ್ರಗಳ ಮೂಲಕ ಖಾತೆಗೆ ಸಂಬಂಧಪಟ್ಟ ದಾಖಲಾತಿಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಎ ಮತ್ತು ಬಿ ಖಾತೆ ವಿತರಣೆಗಾಗಿ ನಗರಸಭೆಯ ಎಲ್ಲ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಜಯಲಕ್ಷ$್ಮಮ್ಮ, ಮಂಜುಳಾ ವೆಂಕಟೇಶ್, ಸೋಮಶೇಖರ್, ಗಿರಿಜಮ್ಮ ಗುರುವೇಗೌಡ, ಅಜ್ಮತ್, ಗೋವಿಂದರಾಜು, ನಾಗಮ್ಮ ಇದ್ದರು.