ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ಕಚೇರಿಯಲ್ಲಿ ಡಿ.15ರ ವರೆಗೆ ಇ-ಖಾತಾ ಶಿಬಿರ ಆಯೋಜಿಸಲಾಗಿದ್ದು, ಸಾರ್ವಜನಿಕರು ಎಲ್ಲ ದಾಖಲೆಗಳೊಂದಿಗೆ ಶಿಬಿರದಲಿ ಭಾಗವಹಿಸಿ ಇ-ಖಾತಾ(ನಮೂನೆ-3) ಪಡೆಯಬಹುದಾಗಿದೆ. ಭೂದಾಖಲೆ ಪ್ರತಿ, ಕನ್ವರ್ಷನ್ ಪ್ರತಿ, 2024-25ರ ತೆರಿಗೆ ರಶೀದಿ, ಕಟ್ಟಡ ಪರವಾನಗಿ ಪ್ರತಿ, ಆಸ್ತಿ ಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕರ ಗುರುತಿನ ಚೀಟಿ, ಏಕನಿವೇಶನ ವಿನ್ಯಾಸ ನಕ್ಷೆ, ಜಾಗದ ನಕ್ಷೆಯ ದಾಖಲೆ ಸಲ್ಲಿಸುವಂತೆ ನಗರ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.