ಜಿಲ್ಲೆ

ಇ-ಖಾತಾ ಯೋಜನೆಗೆ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ವಿಶಾಖಪಟ್ಟಣದಲ್ಲಿ ಸೋಮವಾರ ನಡೆದ ಭಾರತ ಸರ್ಕಾರವು 28ನೇ ರಾಷ್ಟ್ರೀಯ ಇ-&ಆಡಳಿತ ಪ್ರಶಸ್ತಿ ಸಮಾರಂಭದಲ್ಲಿ ಬಿಬಿಎಂಪಿಯ ಇ&-ಖಾತಾ ಯೋಜನೆಗೆ "ರಾಷ್ಟ್ರೀಯ ಇ&-ಆಡಳಿತ ಪ್ರಶಸ್ತಿ " ನೀಡಿ ಗೌರವಿಸಿದೆ.

ಮಹತ್ವಾಕಾಂಕ್ಷಿ ಯೋಜನೆಯಾದ ಇ&-ಖಾತಾ ಯೋಜನೆಯು ಆಸ್ತಿಯ ದಾಖಲೆಗಳನ್ನು ಡಿಜಿಟಲೀಕರಿಸುವುದು, ಪಾರದರ್ಶಕತೆಯನ್ನು ಖಾತ್ರಿ ಪಡಿಸುವುದು ಹಾಗೂ ನಾಗರಿಕ ಸೇವಾ ವಿತರಣೆಯನ್ನು ಬಲಪಡಿಸುವಲ್ಲಿ ಮುಂಚೂಣಿಯ ಪಾತ್ರ ವಹಿಸಿದಕ್ಕಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್​ ಅವರನ್ನು ಪ್ರಶಂಸಿಸಲಾಯಿತು.

ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್​ ಗಿರಿನಾಥ್​, ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್​ ಮೌದ್ಗಿಲ್​, ಜಂಟಿ ಆಯುಕ್ತೆ ಲಕ್ಷ್ಮೀದೇವಿ, ಎನ್​.ಐ.ಸಿಯ ಹಿರಿಯ ತಾಂತ್ರಿಕ ನಿರ್ದೇಶಕ ಸುರೇಶ್​ ಬಾಬು ಹಾಗೂ ಇ&-ಖಾತಾ ತಂಡವು ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್​ ಅವರು ಪ್ರಶಸ್ತಿ ಪ್ರದಾನ ಮಾಡಿದ್ದು, ಇದೇ ವೇಳೆ ಇ-&ಆಡಳಿತ ಪ್ರಶಸ್ತಿ ಜತೆಗೆ 10 ಲಕ್ಷ ರೂ.ನಗದು ಬಹುಮಾನ ಕೂಡಾ ನೀಡಲಾಯಿತು.