ಬೆಂಗಳೂರು: ಈ ಹೊತ್ತಿಗೆ ಟ್ರಸ್ಟ್ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಈ ಹೊತ್ತಿಗೆ ಕಥಾ ಕಮ್ಮಟಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸಿದೆ.
ರಾಜ್ಯ ಬೇರೆ ಬೇರೆ ಊರುಗಳಲ್ಲಿ ಈ ವರ್ಷ ಕಾವ್ಯ, ಕಥೆ, ನಾಟಕ ಮತ್ತು ಅನುವಾದಗಳ ನಾಲ್ಕು ಕಮ್ಮಟಗಳನ್ನು ಏರ್ಪಡಿಸುವ ಯೋಜನೆ ಹೊಂದಿದೆ. ಅದರ ಭಾಗವಾಗಿ ಕಮ್ಮಟವನ್ನು ಬಳ್ಳಾರಿಯಲ್ಲಿ ‘ಅರಿವು’ ಬಳ್ಳಾರಿ ಇವರ ಸಹಯೋಗದೊಂದಿಗೆ ಆಯೋಜಿಸಿದೆ. ಕಮ್ಮಟದಲ್ಲಿ ಭಾಗವಹಿಸಲು ಕನ್ನಡದ ಕಥೆಗಾರರನ್ನು ಮತ್ತು ಕಥಾಸಕ್ತರನ್ನು ಆಹ್ವಾನಿಸಲಾಗಿದೆ.
ಈ ಹೊತ್ತಿಗೆ ಟ್ರಸ್ಟ್, ದಶಮಾನೋತ್ಸವ ಸಂಭ್ರಮದ ನಿಮಿತ್ತ ಆಯೋಜಿಸುತ್ತಿರುವ ಕಮ್ಮಟ ಇದಾಗಿದ್ದು, 'ಅರಿವು', ಬಳ್ಳಾರಿ ಇವರ ಸಹಯೋಗದೊಂದಿಗೆ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಲೋಕದ ಮಹತ್ವದ ವಿಮರ್ಶಕಿಯಾದ ಡಾ. ಎಂ.ಎಸ್. ಆಶಾದೇವಿ ಅವರು ಕಮ್ಮಟದ ನಿರ್ದೇಶಕಿಯಾಗಿರುತ್ತಾರೆ.
ಕಥನ ಪರಂಪರೆ ಬೆಳೆದು ಬಂದ ಬಗೆ, ಜಾಗತಿಕ, ಭಾರತೀಯ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಸ್ಥೂಲ ಪರಿಚಯ, ಸಣ್ಣ ಕಥೆಗಳ ಗುಣ ಲಕ್ಷಣಗಳು, ಅನನ್ಯತೆ, ಮಾದರಿ, ವಿನ್ಯಾಸ, ತಾತ್ವಿಕತೆ, ತಂತ್ರ, ಶೈಲಿ, ಪ್ರಾಯೋಗಿಕತೆಗಳ ಪರಿಚಯ, ಕನ್ನಡದ ಕೆಲವು ಮಹತ್ವದ ಕಥೆಗಳ ವಿಮರ್ಶೆ, ಸಣ್ಣ ಕಥಾ ಪ್ರಕಾರ ನಿಧಾನವಾಗಿ ಮುಖ್ಯ ಸಾಹಿತ್ಯ ಪ್ರಕಾರವಾಗಿ ಬೆಳೆದು, ಸಮಕಾಲಿನ ಸಂದರ್ಭದಲ್ಲಿ ಮುಖ್ಯವಾಗಿರುವ ಪ್ರಕಾರವಾಗಿರುವ ಕಾರಣ ಇವೆಲ್ಲವನ್ನು ಒಳಗೊಳ್ಳುವ ಉದ್ದೇಶ ಈ ಕಮ್ಮಟದ್ದಾಗಿದೆ. ಸಂಪನ್ಮೂಲ ವ್ಯಕ್ತಿಗಳ ಜತೆ ಸಂವಾದ, ಚಟುವಟಿಕೆಗಳು ಕಮ್ಮಟದ ಭಾಗವಾಗಿರುತ್ತವೆ.
ಡಾ. ಎಂ ಎಸ್ ಆಶಾದೇವಿ, ಎಸ್ ದಿವಾಕರ್, ಅಮರೇಶ್ ನುಗಡೋಣಿ, ಕೇಶವ ಮಳಗಿ ಮತ್ತು ಜಯಶ್ರೀ ಕಾಸರವಳ್ಳಿ ಅವರು ಸಂಪನ್ಮೂಲ ವ್ಯಕ್ತಿಗಳು. ಎರಡು ದಿನಗಳ ಕಥಾಹಂದರದಲ್ಲಿ ಭಾಗವಹಿಸಲು ಬಯಸುವವರು ನಿಮ್ಮ ಪರಿಚಯ, ಸಂಪರ್ಕ ಸಂಖ್ಯೆ, ಭಾವಚಿತ್ರ ಮತ್ತು ಸ್ವರಚಿತ ಎರಡು ಕಥೆಗಳನ್ನು ehottige.ks@gmail.com ಈ ಮಿಂಚಂಚೆಗೆ ಕಳುಹಿಸಿಕೊಡಿ. 2023 ಸೆಪ್ಟೆಂಬರ್ 23, 24ರಂದು ನಡೆಯಲಿದೆ.
4. 2023 10 ಆಗಸ್ಟ್ ಅರ್ಜಿ ತಲುಪಲು ಕೊನೆಯ ದಿನಾಂಕ
3. ಶಿಬಿರಕ್ಕೆ ಆಯ್ಕೆಯಾದವರನ್ನು ಸಂಪರ್ಕಿಸಲಾಗುವುದು.
2. ಮೂವತ್ತು ಜನರಿಗೆ ಮಾತ್ರ ಅವಕಾಶ.
1. ಕಮ್ಮಟದ ಪ್ರವೇಶ ಶುಲ್ಕ 2000 ರೂಪಾಯಿ. ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.