ಜಿಲ್ಲೆ

ಕೈಗಾರಿಕೆಗಳಿಗೆ ಕೆಐಎಡಿಬಿಯಿಂದ ಇ ಸ್ವತ್ತು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಗಾಮನಗಟ್ಟಿ, ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಇ ಸ್ವತ್ತು ಸಮಸ್ಯೆ ಪರಿಹರಿಸಲು ಸರ್ಕಾರ ಈಗಾಗಲೇ ಕೆಲವು ಪ್ರದೇಶಗಳನ್ನು ಎಸ್​ಐಆರ್ ಎಂದು ಘೋಷಣೆ ಮಾಡಿದ್ದು, ಅಂತಹ ಪ್ರದೇಶಗಳಿಗೆ ನೇರವಾಗಿ ಕೆಐಎಡಿಬಿ ಇಸ್ವತ್ತು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೆಐಎಡಿಬಿ ಎಕ್ಸಿಕ್ಯುಟಿವ್ ಇಂಜಿನಿಯರ್ ಮತ್ತು ಅಭಿವೃದ್ಧಿ ಅಧಿಕಾರಿ ಆನಂದಕುಮಾರ ಜಳಕಿ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್​ನಲ್ಲಿನ ಉತ್ತರ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ ಹುಬ್ಬಳ್ಳಿ ಯು.ಕೆ.ಎಸ್.ಎಫ್.ಸಿ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಗಳೊಂದಿಗೆ ನಡೆದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಇ ಸ್ವತ್ತು ನೀಡುವ ವ್ಯವಸ್ಥೆ ಜಾರಿಯಾಗಲಿದೆ. ಈ ಮೂಲಕ ಕೈಗಾರಿಕೋದ್ಯಮಿಗಳ ಬಹಳ ದಿನಗಳ ಸಮಸ್ಯೆ ಬಗೆಹರಿಯಲಿದೆ ಎಂದರು.

ಕೈಗಾರಿಕೋದ್ಯಮಿಗಳು ತೆರಿಗೆಯನ್ನು ಕೆಐಎಡಿಬಿಗೆ ಪಾವತಿಸಬೇಕು. ನಮ್ಮ ಸಂಸ್ಥೆಯೇ ಕೈಗಾರಿಕೆ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ತಾರಿಹಾಳ, ಗಾಮನಗಟ್ಟಿ ಕೈಗಾರಿಕೆ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕೆಐಎಡಿಬಿ ಮತ್ತು ಕೆಎಸ್​ಎಸ್​ಐಡಿಸಿ ಅಸೋಸಿಯೇಷನ್ ಸಬ್ ಕಮಿಟಿ ಚೇರ್ಮನ್ ಅಶೋಕ ಕುನ್ನೂರ ಮಾತನಾಡಿದರು. ಹುಬ್ಬಳ್ಳಿ-ಧಾರವಾಡದಲ್ಲಿ ಏರೋ ಸ್ಪೇಸ್ ಪಾರ್ಕ್ ನಿರ್ವಣಕ್ಕೆ ಉಕ ಸಣ್ಣ ಕೈಗಾರಿಕೆಗಳ ಸಂಘದಿಂದ ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.

ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ, ಕೆಎಸ್​ಎಸ್​ಐಡಿಸಿ ಅಧಿಕಾರಿ ಸುನಿತಾ, ಸಂಘದ ಉಪಾಧ್ಯಕ್ಷರಾದ ನಾಗೇಶ ರಿತ್ತಿ, ವಿಜೇಶ ಸೈಗಲ್,ಕಾರ್ಯದರ್ಶಿ ಶ್ರೀಪತಿ ಭಟ್, ಸಹ ಕಾರ್ಯದರ್ಶಿ ಸಂದೀಪ ಬಿಡಸಾರಿಯಾ, ಮೈಕೆಲ್ ಮಡಕಟ್ಟಿ, ನರೇಂದ್ರ ಕುಲಕರ್ಣಿ, ವೀರಭದ್ರಣ್ಣ ತೊಪ್ಪದ, ಉದ್ಯಮಿಗಳಾದ ವಿಶ್ವನಾಥ ಗೌಡರ, ಎಂ.ಕೆ. ಪಾಟೀಲ, ಜಗದೀಶ ಮಠದ, ಮೃತ್ಯುಂಜಯ ಮುರೊಳ, ಎಂ.ಬಿ ಗೊರನಕೊಳ್ಳ, ಮನೋಹರ ಕೊಟ್ಟೂರಶೆಟ್ಟರ, ರಾಹುಲ್ ಕೊಬರೆ, ಸಂತೋಷ ವೈಕುಂಟೆ, ಸುರೇಶ ಮುದ್ದಿ, ಎಂ.ಬಿ. ಬೆಳಕೊಪ್ಪ, ವಿಶ್ವನಾಥ ಅಂಗಡಿಕಿ, ಅಶೋಕ ದಾನಿ, ನಿತು ಸಿಂಗ್, ಪ್ರಕಾಶ ಹಿರೇಮಠ, ವಿಮಲ್ ಅಂಗಡಕಿ ಹಾಗೂ ಇತರರು ಇದ್ದರು.