ಸಿರಗುಪ್ಪದಲ್ಲಿ ವಾಹನ ಸವಾರರಿಗೆ ಡಿವೈಎಸ್ಪಿ ವೆಂಕಟೇಶ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು. ಪಿಎಸ್‌ಐಗಳಾದ ತಿಮ್ಮಣ್ಣನಾಯಕ, ಶಾಂತಮೂರ್ತಿ, ಪಂಪಾಪತಿ, ಸದ್ದಾಂ ಹುಸೇನ್ ಹಾಗೂ ಸಿಬ್ಬಂದಿ ಇದ್ದರು. 
ಜಿಲ್ಲೆ

ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ

ಸಿರಗುಪ್ಪ: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ವಾಹನ ಸವಾರರಿಗೆ ಡಿವೈಎಸ್ಪಿ ವೆಂಕಟೇಶ ದಂಡ ವಿಧಿಸಿ ಶನಿವಾರ ಬಿಸಿ ಮುಟ್ಟಿಸಿದರು.

ದ್ವಿಚಕ್ರ ವಾಹನದಲ್ಲಿ ಮೂರು ಜನ ಸಂಚರಿಸುವ, ಕರ್ಕಶ ಶಬ್ಧ ಮಾಡುವ ಸೈಲೆನ್ಸರ್ ಪೈಪ್ ಅಳವಡಿಕೆ, ವಾಹನ ಚಲಾಯಿಸುವಾಗ ಫೋನ್ ಬಳಸುವುದು, ಅತಿವೇಗವಾಗಿ ಚಾಲನೆಮಾಡುವುದು, ಚಾಲನಾ ಪರವಾನಗಿ ಇಲ್ಲದಿರುವುದು, ಹೆಲ್ಮೆಟ್ ಧರಿಸದಿರುವುದು, ಟ್ರ್ಯಾಕ್ಟರ್ ಮತ್ತು ಆಟೋ ಸೇರಿ ಇತರ ವಾಹನಗಳಲ್ಲಿ ದ್ವನಿ ವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ವಾಹನ ಸವಾರರಿಗೆ ದಂಡ ವಿಧಿಸಲಾಯಿತು.

ನಿಯಮ ಉಲ್ಲಂಘಿಸಿ ಸಂಚಾರ ಮಾಡುವಂತಿಲ್ಲ

ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಹಜವಾಗಿ ವಾಹನಗಳ ಓಡಾಟವೂ ಹೆಚ್ಚಾಗುತ್ತಿದೆ. ನಿವಯಮಗಳನ್ನು ಉಲ್ಲಘಿಸಿ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಈ ಮುಂಚೆ ನಿಯಮಗಳ ಕುರಿತು ಸವಾರರಿಗೆ ಜಾಗೃತಿ ಮೂಡಿಸಲಾಗಿದೆ. ಆದರೂ ಪ್ರಯೋಜವಾಗಿಲ್ಲ. ಹೀಗಾಗಿ ದಂಡವನ್ನು ವಿಧಿಸಲಾಗುತ್ತಿದೆ ಎಂದು ಡಿವೈಎಸ್ಪಿ ವೆಂಕಟೇಶ ತಿಳಿಸಿದರು.

ಸಿರಗುಪ್ಪ ಪಿಎಸ್‌ಐ ತಿಮ್ಮಣ್ಣನಾಯಕ, ತೆಕ್ಕಲಕೋಟೆ ಪಿಎಸ್‌ಐ ಶಾಂತಮೂರ್ತಿ, ಹಚ್ಚೊಳ್ಳಿ ಪಿಎಸ್‌ಐ ಪಂಪಾಪತಿ, ಸಿರಿಗೇರಿ ಪಿಎಸ್‌ಐ ಸದ್ದಾಂ ಹುಸೇನ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.