ಜಿಲ್ಲೆ

ಕಲಬುರಗಿಯ ಉಪನಗರ ಠಾಣಾಧಿಕಾರಿಯಾಗಿ ಖಡಕ್ ಇನ್ಸ್‌ಪೆಕ್ಟರ್ ಸಂತೋಷ ತಟ್ಟೆಪಳ್ಳಿ ನಿಯೋಜನೆ

ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.


ವಿಜಯವಾಣಿ ಸುದ್ದಿಜಾಲ ಕಲಬುರಗಿ

ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಕಲಬುರಗಿ ನಗರದ ಉತ್ತರ ಉಪ ವಿಭಾಗದ ಎಸಿಪಿಯಾಗಿ ಶರಣಬಸವೇಶ್ವರ ಭಜಂತ್ರಿ, ಬೀದರ್ ಉಪ ವಿಭಾಗದ ಡಿವೈಎಸ್ಪಿಯಾಗಿ ಶಿವನಗೌಡ ಪಾಟೀಲ್ ನಿಯೋಜನೆಗೊಂಡಿದ್ದಾರೆ.

ಕಲಬುರಗಿ ನಗರ ಆಯುಕ್ತಾಲಯದ ಸಬ್ ಅರ್ಬನ್ (ಗ್ರಾಮೀಣ) (ಉಪನಗರ) ಠಾಣೆಯ ಇನ್‌ಸ್ಪೆಕ್ಟರ್ ಆಗಿ ಖಡಕ್ ಪೊಲೀಸ್ ಅಧಿಕಾರಿ ಸಂತೋಷ ತಟ್ಟೆಪಳ್ಳಿ,  ಮಹಾಂತೇಶ ಪಾಟೀಲ್ ಸಂಚಾರ ಠಾಣೆ-೧, ರಮೇಶ ಕಾಂಬಳೆ ಸಿಸಿಆರ್‌ಬಿಗೆ, ರಾಘವೇಂದ್ರ ಎಚ್.ಎಸ್. ಸುಲೇಪೇಟ ವೃತ್ತ, ಪ್ರಕಾಶ ಯಾತನೂರ ಆಳಂದ ವೃತ್ತಕ್ಕೆ ವರ್ಗಾಯಿಸಲಾಗಿದೆ.

ಖಡಕ್ ಅಧಿಕಾರಿ ಸಿಂಗಂ ತಟ್ಟೆಪಳ್ಳಿ

ಸಂತೋಷ ತಟ್ಟೆಪಳ್ಳಿ ಸದ್ಯಕ್ಕೆ‌ನಗರ ಪೊಲೀಸ್ ಆಯುಕ್ತಾಲಯದ ಸಿಸಿ ಆರ್ ಬಿ ಘಟಕದ ಇನ್ ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ‌‌ ಬೀದರ್, ಅಫಜಲಪುರ, ಕಲಬುರಗಿ,ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಖಡಕ್ ಅಧಿಕಾರಿಯಾಗಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕ ಅಧಿಕಾರಿ, ಕೆಲಸ ಮಾಡಿದ ಕಡೆಯಲ್ಲ ಸಿಂಗಂ ಎಂದು ಹೆಸರು ಮಾಡಿದ್ದಾರೆ.
= =