ಜಿಲ್ಲಾ ಸೆನ್ ಠಾಣೆಗೆ ಬಸವೇಶ್ವರ DySp- ಕಪಿಲ್‌ದೇವ ಗಡಾದ್-ಚಿಂಚೋಳಿ ದ್ರುವತಾರ- ಭೀಮರತ್ನ ಜೆಸ್ಕಾಂ ಜಾಗೃತದಳ CPI
ಕಲಬುರಗಿ : ಸೋಮವಾರ ರಾಜ್ಯ ಸರ್ಕಾರವು ೨೫ ಡಿವೈಎಸ್ಪಿ ಹಾಗೂ ೮೮ ಜನ ಸಿಪಿಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬಸವೇಶ್ವರ ಹೀರಾ ಕಲಬುರಗಿ ಜಿಲ್ಲಾ ಜಿಲ್ಲಾ ಸೆನ್ ಹಾಗೂ ನಾಗರಾಜ ಜಿ-ಯಾದಗಿರಿ ಜಿಲ್ಲಾ ಸೆನ್ ಠಾಣೆಯ ಡಿವೈಎಸ್ಪಿಯಾಗಿ ನಿಯೋಜನೆಗೊಂಡಿದ್ದಾರೆ.
ಸಿಪಿಐಗಳಾದ ದ್ರುವತಾರ.ಸಿ- ಜೆಸ್ಕಾಂ ಜಾಗೃತದಳ ಕಲಬುರಗಿ,ಭೀಮರತ್ನ-ಜೆಸ್ಕಾಂ ಜಾಗೃತ ದಳ ಯಾದಗಿರಿ, ಕಪಿಲ್‌ದೇವ ಗಡಾದ್-ಚಿಂಚೋಳಿ ವೃತ್ತ,ಮಹಾದೇವ ಡಿ-ಸೇಡಂ ವೃತ್ತ, ವಿಜಯಕುಮಾರ-ನ್ಯೂಟೌನ್ ಠಾಣೆ ಬೀದರ್, ಸಂಜೀವಕುಮಾರ ಕುಂಬಾರಗೇರಿ-ಐಜಿಪಿ ಕಚೇರಿ ಕಲಬುರಗಿ, ದೇವೇಂದ್ರಪ್ಪ ಧೂಳಖೇಡ-ಗುರುಮಠಕಲ್ ವೃತ್ತ, ಅಡೆಪ್ಪ-ಡಿಎಸ್‌ಬಿ ಬೀದರ್, ಅಬ್ದುಲ್ ಹಮೀದ್ ಡಿಎಸ್‌ಬಿ ಕಲಬುರಗಿ ಜಿಲ್ಲಾ ಪೊಲೀಸ್ ಇಲ್ಲಿಗೆ ವರ್ಗಾವಣೆಗೊಳಿಸಿ ಡಿಜಿಪಿ ಪರವಾಗಿ ಸೌಮೆಂದೋ ಮುಖರ್ಜಿ ಆದೇಶ ಹೊರಡಿಸಿದ್ದಾರೆ.