ಅಳವಂಡಿಯ ಶ್ರೀ ದ್ಯಾಮಾಂಬಿಕಾ ದೇವಿಗೆ ರಜತ (ಬೆಳ್ಳಿ) ಕಿರೀಟ ಧಾರಣೆ ಮಾಡಿರುವುದು. 
ಜಿಲ್ಲೆ

ದ್ಯಾಮಾಂಬಿಕಾ ದೇವಿಗೆ ರಜತ ಕಿರೀಟ ಧಾರಣೆ

Kopala - Desk - Eraveni

ಅಳವಂಡಿ: ಗ್ರಾಮದ ದ್ಯಾಮಾಂಬಿಕಾ ದೇವಿಗೆ ರಜತ ಕಿರೀಟ ಧಾರಣೆ ಕಾರ್ಯಕ್ರಮ ಅದ್ದೂರಿಯಾಗಿ ಹೊನ್ನುಗ್ಗಿಯ ದಿನವಾದ ಮಂಗಳವಾರ ಜರುಗಿತು.

ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಲ್ಲಾರ ಭಟ್ಟ ಜೋಶಿ, ದೇವಿಗೆ ಪಂಚಾಮೃತ ಅಭಿಷೇಕ, ಶ್ರೀದೇವಿ ಸ್ತೋತ್ರಗಳನ್ನು ಪಠಿಸಿ ಪೂಜೆ ನೆರವೇರಿಸಿದರು. ಭಕ್ತರಿಗೆ ಮಹಾಪ್ರಸಾದ ಸೇವಾ ಕಾರ್ಯಕ್ರಮ ನಡೆಯಿತು.