ಬೆಂಗಳೂರು : ವಿಶ್ವ ಆಸ್ಟಿಯೋಪೊರೋಸಿಸ್ ದಿನದ ಅಂಗವಾಗಿ ಎಲುಬು ಆರೋಗ್ಯ ಮತ್ತು ಅಸ್ಥಿರಂಧ್ರತೆಯಿಂದ ಹೆಚ್ಚುತ್ತಿರುವ ಭಾರ ಎಂಬ ವಿಷಯದ ಮೇಲೆ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನೂತನವಾಗಿ ಸ್ಥಾಪಿಸಲಾಗಿರುವ ಡಿಎಕ್ಸೃ್ಎ ಸ್ಕ್ಯಾನರ್‌ನ ಮೂಲಕ ಸಮಯೋಚಿತ ತಪಾಸಣೆ ಮಾಡಿಸುವ ಮೂಲಕ ರೋಗವನ್ನು ಬೇಗ ಪತ್ತೆ ಮಾಡಬಹುದಾಗಿದೆ. ಸಾರ್ವಜನಿಕರು ಈ ಬಗ್ಗೆ ಹೆಚ್ಚು ಜಾಗೃತರಾಗುವಂತೆ ರಾಮಯ್ಯ ಆಸ್ಪತ್ರೆ ವೈದ್ಯರು ಕರೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಎಂಡೊಕ್ರೈನಾಲಜಿ ವಿಭಾಗದ ಮುಖ್ಯಸ್ಥೆ ಡಾ.ಎಸ್.ಚಿತ್ರಾ, ಜಗತ್ತಿನಾದ್ಯಂತ 500 ಮಿಲಿಯನ್ ಜನರನ್ನು ಬಾಧಿಸುತ್ತಿದ್ದು, ಅಸ್ಥಿರಂಧ್ರತೆಯಿಂದ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಭಾರತದಲ್ಲಿ, ವಯಸ್ಸು, ಜೀವನಶೈಲಿ ಮತ್ತು ಪೌಷ್ಠಿಕಾಂಶದ ಕೊರತೆಯಿಂದ ಮೂಳೆ ಮುರಿತಗಳು ಹೆಚ್ಚುತ್ತಿವೆ. 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಮತ್ತು ಪ್ರತಿ 20 ಪುರುಷರಲ್ಲಿ ಒಬ್ಬರು ಆಸ್ಟಿಯೋಪೊರೋಸಿಸ್‌ನಿಂದ ಬಳಲುತ್ತಿದ್ದಾರೆ. 50 ವರ್ಷಕ್ಕಿಂತ ಮೇಲ್ಪಟ್ಟವರು ಎಲುಬು ಆರೋಗ್ಯದ ಮಹತ್ವವನ್ನು ಅರಿತು ಡಿಎಕ್ಸ್‌ಎ ಸ್ಕ್ಯಾನರ್‌ನ ಮೂಲಕ ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಚ್ೀ ಆಪರೇಟಿಂಗ್ ಆಫೀಸರ್ ಡಾ.ಮದನ್ ಎಸ್. ಗಾಯಕ್ವಾಡ್, ವೈದ್ಯರುಗಳಾದ ಡಾ. ಶಾಲಿನಿ, ಡಾ.ಪ್ರಮಿಳಾ, ಡಾ. ಮಂಜುನಾಥ, ಮತ್ತಿತರರು ಉಪಸ್ಥಿತರಿದ್ದರು.
ಮೂಳೆಗೆ ಸಂಬಂಧಪಟ್ಟಂತೆ ರಾಮಯ್ಯ ಆಸ್ಪತ್ರೆ ಇದೇ ಮೊದಲ ಬಾರಿಗೆ ಅತ್ಯಾಧುನಿಕ ಮತ್ತು ಬಹುಪಯೋಗಿ ಸ್ಕಾೃನಿಂಗ್ ಯಂತ್ರವನ್ನು ಪರಿಚಯಿಸಿದೆ. ಬೋನ್ ಮತ್ತು ಮೆಟಾಬಾಲಿಕ್ ಹೆಲ್ತ್ ಸ್ಕ್ಯಾನರ್ ಬಹು ವಿಧ ರೋಗಗಳನ್ನು ಪತ್ತೆ ಮಾಡಲಿದ್ದು, ಇದರ ತಪಾಸಣೆ ವೆಚ್ಚ ಕಡಿಮೆ ದರದಿಂದ ಕೂಡಿದೆ. ಬಿಎಂಡಿ (ಬೋನ್ ಮಿನಿರಲ್ ಡೆನ್ಸಿಟಿ), ಟಿಬಿಎಸ್(ಟ್ರಾಬಿಕುಲರ್ ಬೋನ್ ಸ್ಕೋರ್) ಎಲ್ವಿಎ( ಲ್ಯಾಟರಲ್ ವಾಟೆಬ್ರಲ್ ಅಸೆಸ್ಮೆಂಟ್), ವಿಎಫ್‌ಎ(ವಾಟೆಬ್ರಲ್ ಫ್ರಾಕ್ಚರ್ ಅಸೆಸ್ಮೆಂಟ್), ಅಡ್ವಾನ್ಸ್ ಬಾಡಿ ಕಂಪೋರ್ಸ್‌ನ ಎಲ್ಲ ಪರೀಕ್ಷೆಗಳು ಒಂದೇ ಪರೀಕ್ಷೆಯಿಂದ ತಿಳಿಯಲಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಮಾತ್ರ ಇಂತಹದ್ದೊಂದು ವಿಶೇಷ ಸೌಲಭ್ಯ ಹೊಂದಿದೆ.