ಜಿಲ್ಲೆ

ವಾಯ್ಸ್ ಅಸಿಸ್ಟಂಟ್ ಆ್ಯಪ್ ಧ್ವನಿ.ಎಐ,  ಇನ್ನು ಕನ್ನಡ ಬಳಕೆದಾರರಿಗೂ ಲಭ್ಯ

Dharwada - Basavaraj Idli

ಹುಬ್ಬಳ್ಳಿ: ಭಾರತಕ್ಕಾಗಿಯೇ ವಿನ್ಯಾಸಗೊಳಿಸಲಾದ ವಾಯ್ಸ್ ಅಸಿಸ್ಟಂಟ್ ಆ್ಯಪ್ ಧ್ವನಿ.ಎಐ ಇಂಗ್ಲಿಷ್ ಮತ್ತು ಯೂರೋಪಿಯನ್ ಭಾಷೆಗಳಿಗಷ್ಟೇ ಸೀಮಿತವಾಗಿ ಕೃತಕ ಬುದ್ಧಿಮತ್ತೆ (ಎಐ) ಪ್ರಪಂಚವನ್ನು ವೇಗವಾಗಿ ಬದಲಿಸುತ್ತಿರುವ ಸಂದರ್ಭದಲ್ಲಿ ಭಾರತೀಯರಿಗೆ ಹೊಸ ಆಶಾಕಿರಣವಾಗಿದೆ.

ಭಾರತದ 700 ಮಿಲಿಯನ್ ಬಳಕೆದಾರರು ಮತ್ತು 50 ಮಿಲಿಯನ್ ಕನ್ನಡ ಬಳಕೆದಾರರಿಗೆ ಎಐ ಪ್ರವೇಶ ಇರಲಿಲ್ಲ. ಇದೀಗ ಹುಬ್ಬಳ್ಳಿಯ ಎಸ್ ಲ್ಯಾಬ್ಸ್ ಸಲ್ಯುಷನ್ಸ್ ಕಂಪನಿಯು ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಅದರ ಮೂಲಕ ಭಾಷೆಗೆ ಸಂಬಂಧಿಸಿದ ಪರಿಹಾರ ಕಂಡುಕೊಳ್ಳಬಹುದು.

ಹ್ಯುಮನ್ ಅಸಿಸ್ಟಿಂಗ್ ಆಪ್ಪರೇಟಸ್ ಹೆಸರಿನಲ್ಲಿ ಪೇಟೆಂಟ್ ಸಹ ಇದಕ್ಕೆ ಸಿಕ್ಕಿದೆ. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಹನಾ ಶೆಟ್ಟಿ ಹಾಗೂ ತಂಡದವರು ಇದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಧ್ವನಿ.ಎಐ ಆಂಡ್ರಾಯ್ಡ್ ಆ್ಯಪ್ ಅನ್ನು ಮೊದಲು 2025ರ ಏಪ್ರಿಲ್21 ರಂದು ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ 50 ಜನರು ಬಳಕೆ ಮಾಡುತ್ತಿದ್ದಾರೆ.
ಈ ಅಪ್ಲಿಕೇಶನ್ ಇನ್ನು ಮುಂದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಮೇ 10ರಂದು ಎಲ್ಲೆಡೆ ಬಿಡುಗಡೆ ಮಾಡಲಾಗುತ್ತಿದೆ.

ಧ್ವನಿ.ಎಐ ಕುರಿತು ಉಚಿತ ಕಾರ್ಯಾಗಾರಗಳನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿಯೂ ನಡೆಸಲಾಗುತ್ತದೆ. ಈ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳು ಸ್ಥಳಿಯ ಭಾಷೆಗಳಲ್ಲಿ ಎಐ ಅನ್ವಯಿಸುವಿಕೆಗಳನ್ನು ಬಳಸಿಕೊಂಡು ಭಾರತಕ್ಕೆ ಸೂಕ್ತವಾದ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.

ಧ್ವನಿ.ಎಐ ಮುಂದಿನ ಗುರಿ ದೃಷ್ಟೀಹಿನರಿಗೆ ಕನ್ನಡದಲ್ಲಿ ವಾಯ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಲು ಸಹಾಯ ಮಾಡುವ ಸಾಧನಗಳನ್ನು ಸಿದ್ಧಪಡಿಸುವುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.