ಮಡಿಕೇರಿ:
೨೦೨೩ನೇ ಸಾಲಿನ ಮಡಿಕೇರಿ ದಸರಾ ಸ್ವಾಗತ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಗರದ ದಸರಾ ಸಮಿತಿ ಕಚೇರಿಯಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಎ.ಜಿ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಯಕ್ಷಿತ್ ಅಪ್ಪಯ್ಯ ಕೊತ್ತೋಳಿ, ಖಜಾಂಚಿಯಾಗಿ ಆರ್.ಪಿ. ಚಂದ್ರಶೇಖರ್, ಸಹ ಕಾರ್ಯದರ್ಶಿಯಾಗಿ ಹಬೀಬ್ ಅಹಮ್ಮದ್ ಹಾಗೂ ಗೌರವ ಸಲಹೆಗಾರರಾಗಿ ಶೇಕ್ ಅಹಮ್ಮದ್ ಆಯ್ಕೆಯಾದರು.