ಜಿಲ್ಲೆ

ಹಿರೇಕೆರೂರ ಮೌನೇಶ್ವರ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮ ನಾಳೆಯಿಂದ

Gadag - Desk - Tippanna Avadoot

ಹಿರೇಕೆರೂರ: ತಾಲೂಕಿನ ಕೋಡ ಗ್ರಾಮದ ಮೌನೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಟ್ರಸ್ಟ್ ಕಮೀಟಿ ವತಿಯಿಂದ ದಸರಾ ಹಬ್ಬದ ನಿಮಿತ್ತ ಅ. 3ರಿಂದ 12ರವರೆಗೆ ನಿತ್ಯ ವಿವಿಧ ಧಾರ್ವಿುಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಅ. 3ರಂದು ದೇವಿಯ ಉತ್ಸವ ಮೆರವಣಿಗೆ ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನ ತಲುಪುವುದು. ನಂತರ ದೇವಿಗೆ ಅಭಿಷೇಕ, ಘಟಸ್ಥಾಪನೆ, ಸಂಜೆ 6 ಗಂಟೆಗೆ ಬೆನಕನಕೊಂಡದ ಮಲ್ಲೀಕಾರ್ಜುನಾಚಾರ್ ಮತ್ತು ಸಂಗಡಿಗರಿಂದ ದೇವಿಯ ಪುರಾಣ ಪ್ರವಚನ ಆರಂಭಗೊಳ್ಳುವುದು. ಈ ಕಾರ್ಯಕ್ರಮವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಲಿದ್ದು, ಮೌನೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಪರಮೇಶ್ವರಾಚಾರ್ ಅರ್ಕಾಚಾರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಸಿ. ಪಾಟೀಲ, ಡಾ. ಚಾಮರಾಜ ಕಮ್ಮಾರ, ಕವಿತಾ ಬಿದರಿ, ಪ್ರಕಾಶಗೌಡ ಗೌಡರ, ಶಿಲ್ಪಾ ತುಮರಿಕೊಪ್ಪ, ಬಸವರಾಜ ತಿಪ್ಪಣ್ಣನವರ ಭಾಗವಹಿಸುವರು ಎಂದು ದೇವಸ್ಥಾನ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.