ಮೈಸೂರು: 2023-24 ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಅಕ್ಟೋಬರ್ 15 ರಿಂದ 24 ರವರೆಗೆ ನಿಶಾದ್ ಬಾಗ್ (ಕುಪ್ಪಣ್ಣ ಪಾರ್ಕ್) ಅವರಣದಲ್ಲಿ ಆಯೋಜಿಸಲು ತಿರ್ಮಾನಿಸಲಾಗಿದ್ದು, ಜಿಲ್ಲೆಯ ವಿವಿಧ ಬೃಹತ್ ಕೈಗಾರಿಕಾ ಉದ್ಯಮಗಳು ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಆಸಕ್ತಿಯುಳ್ಳವರು ಅ.5ರೊಳಗೆ ನಗರದ ಕರ್ಜನ್ ಪಾರ್ಕ್‌ನಲ್ಲಿರುವ ಜಿಲ್ಲಾ ತೋಟಗಾರಿಕೆ ಸಂಘದ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ತೋಟಗಳ ಸ್ಪರ್ಧೆ: ಕೈಗಾರಿಕಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಆಡಳಿತ ಅಧಿಕಾರಿ ಕಚೇರಿ, ಆಸ್ಪತ್ರೆ ತೋಟಗಳು, ಖಾಸಗಿ ತೋಟಗಳು ಮತ್ತು ಮನೆ ಮುಂದಿನ ಕೈ ತೋಟಗಳು ಇತರೆ ಸಂಘ ಸಂಸ್ಥೆಗಳಿಗೆ ಅಕ್ಟೋಬರ್ 5, 6 ಮತ್ತು 7ರಂದು ತೋಟಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಸೆ.30 ರವರೆಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತರು ತಮ್ಮ ಸಂಸ್ಥೆಯ ಹೆಸರು ಮತ್ತು ವಿಳಾಸವನ್ನು ಜಿಲ್ಲಾ ತೋಟಗಾರಿಕೆ ಸಂಘದ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡು ರಶೀದಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.