ಜಿಲ್ಲೆ

ಹುಲಿಗೆಮ್ಮಾ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಸಂಪನ್ನ


ಹುಬ್ಬಳ್ಳಿ : ಇಲ್ಲಿನ ಅರವಿಂದನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ವಿಜಯದಶಮಿ ದಿನದಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ಹುಲಿಗೆಮ್ಮದೇವಿ ಮೂರ್ತಿಗೆ ಬೆಳಗಿನಜಾವ ನವವಿಧ ಸ್ನಾನ, ಮಹಾಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕಾರ, ಮುತೈದೆಯರಿಂದ ಅರಿಶಿಣ, ಕುಂಕುಮ, ಏರಿಸಿ 108 ತುಪ್ಪದ ಬತ್ತಿಯ ಆರತಿಯಿಂದ ಉದಯಪೂಜೆ ನೆರವೇರಿಸಲಾಯಿತು.
ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀದೇವಿಯ ಉತ್ಸವ ಮೂರ್ತಿಯನ್ನಿರಿಸಿ, ಡೊಳ್ಳುಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಅರವಿಂದನಗರದ ಕೆ.ಎಚ್.ಬಿ. ಕಾಲನಿಯ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನಕ್ಕೆ ತೆರಳಿ, ಪೂಜೆಕೈಂಕರ್ಯಗಳನ್ನು ನೆರವೇರಿಸಿ, ಬನ್ನಿ ಮುಡಿದು ಪುನಃ ಮೂಲ ದೇವಸ್ಥಾನಕ್ಕೆ ಆಗಮಿಸಿತು.
ನಂತರ ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಅವರು ಶ್ರೀದೇವಿ ಮಹಾತ್ಮೆ ಪುರಾಣವನ್ನು ಮಂಗಲ ಮಾಡಿದರು. ನಂತರ ಶ್ರೀದೇವಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಜೆ ಶ್ರೀದೇವಿಗೆ ಮಹಾಪೂಜೆಯ ಮಹಾಮಂಗಳಾರತಿ ನೆರವೇರಿಸಿ, ಶರನ್ನವರಾತ್ರಿ ದಸರಾಮಹೋತ್ಸವ ಕಾರ್ಯಕ್ರಮ ಸಮಾರೋಪಗೊಂಡಿತು.
ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಹಿರಿಯರಾದ ಕೆ.ಕೆ. ಮುಳಗುಂದ, ಪ್ರಕಾಶ ಅರಗಂಜಿ, ಮನೋಜ ದೇಸಾಯಿ, ಶ್ರೀಧರ ಮಗಜಿಕೊಂಡಿ, ಬಸವಂತಪ್ಪ ಅನವಾಲ, ಯಲ್ಲಪ್ಪ ಕೊಸಗಿ, ವಿಜಯ ಆಲೂರ, ರವಿ ದಾಗಿನದಾರ, ಗುರುನಾಥ ಗಾಂವಕರ, ಲಕ್ಷ್ಮಣ ವಡ್ಡರ, ಪರಶುರಾಮ ಸುಳ್ಳದ, ಸಂದೀಪ ಬೇವಿನಕಟ್ಟಿ, ಮಲ್ಲು ಅನಂತಪುರ, ರಘು ಭಾವಿಕಟ್ಟಿ, ರೋಹಿತ ವಜ್ಜಣ್ಣವರ, ಧರ್ಮರಾಜ ಭೋಜಗಾರ, ಧ್ರುವ, ಶಾರದಮ್ಮ ಕಸ್ತೂರಿ, ಶೋಭಾ ಅರ್ಕಚಾರಿ, ಹನಮವ್ವ ಡೊಂಗರೆ, ಯೋಗಿಣಿ ಶೆಲ್ಲಿಕೆರಿ, ವಿದ್ಯಾ ದಾಗಿನದಾರ, ವೀಣಾ ಅನಂತಪುರ, ಭಕ್ತರಾದ ಯೋಗಿಣಿ ಶೆಲ್ಲಿಕೇರಿ, ರೇಖಾ ಸುಳ್ಳದ ಹಾಗೂ ಇತರರು ಪಾಲ್ಗೊಂಡಿದ್ದರು.