ಕೊಂಡ್ಲಹಳ್ಳಿ: ಬಿ.ಜಿ.ಕೆರೆ ಗ್ರಾಮದ ಬಸವೇಶ್ವರ ನಗರದಲ್ಲಿ ಬಸವಪಟ್ಟಣದ ಶ್ರೀ ದುರ್ಗಾಂಬಿಕಾ ದೇವಿ ಮಹೋತ್ಸವ ಸೆ.5ರ ಮಂಗಳವಾರ ನಡೆಯಲಿದೆ.
ವಿಗ್ರಹ ಪ್ರತಿಷ್ಠಾಪನೆ, ದೇವಸ್ಥಾನ ಲೋಕಾರ್ಪಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಉತ್ಸವದಲ್ಲಿ ಗಂಗಾಪೂಜೆ, ರಾಜಬೀದಿಗಳಲ್ಲಿ ದೇವಿಯ ಮೆರವಣಿಗೆ ಆಯೋಜಿಸಲಾಗಿದೆ.
ಮುಂಜಾನೆ 3 ಗಂಟೆಗೆ ಗೋ, ಗಣಪತಿ ಪೂಜೆ, ನವಗ್ರಹ ಶಾಂತಿ, ಗಣಪತಿ ಹೋಮ, ದುರ್ಗಾ ಹೋಮ ಸೇರಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. 5 ಗಂಟೆಗೆ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಮಹಾಭಿಷೇಕ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಬೆಳಗ್ಗೆ 10 ಗಂಟೆಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.