ಜಿಲ್ಲೆ

ವಿಜೃಂಭಣೆಯ ಅಂತರಗಟ್ಟೆ ದುರ್ಗಾಂಬಾ ದೇವಿ ರಥೋತ್ಸವ

Chikkamagaluru

ಅಜ್ಜಂಪುರ: ಅಂತರಗಟ್ಟೆ ದುರ್ಗಾಂಬಾ ದೇವಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ದುರ್ಗಾಂಬೆ, ಮಾರಾಳಮ್ಮ ದೇವಿ, ಮಾತಂಗೆಮ್ಮ, ಗೋಣಿ ಮರದಮ್ಮ ದೇವಿ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ರಥೋತ್ಸವ ವೇಳೆ ಭಕ್ತರು ಜಯಘೊಷ ಕೂಗಿ ಸಂಭ್ರಮಿಸಿದರು. ಬಾಳೆಹಣ್ಣು, ನಿಂಬೆಹಣ್ಣನ್ನು ರಥದ ಮೇಲೆ ಎಸೆದು ಸಂತಸಪಟ್ಟರು. ದೇವಿಗೆ ಹೂ-ಹಣ್ಣು ಸಮರ್ಪಿಸಿ, ಭಕ್ತಿ ಮೆರೆದರು. ರಸ್ತೆ ಬದಿಯಲ್ಲಿ ಪುರಿ, ಸಿಹಿ ತಿನಿಸುಗಳು, ಆಟಿಕೆ ಅಂಗಡಿ ಮಾಲೀಕರು ಭರ್ಜರಿ ವಹಿವಾಟು ನಡೆಸಿದರು.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಂದಲೂ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಬಸ್, ಎತ್ತಿನ ಬಂಡಿ, ನೂರಾರು ಟ್ರ್ಯಾಕ್ಟರ್, ಟ್ರಕ್, ಆಟೋಗಳಲ್ಲಿ ಸಾವಿರಾರು ಜನ ಜಾತ್ರೆಗೆ ಅಗಮಿಸಿದ್ದರು.

ಉಪವಿಭಾಗಾಧಿಕಾರಿ ರೂಪಾ, ಅಜ್ಜಂಪುರ ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ, ಶಾಸಕ ಡಿ.ಎಸ್.ಸುರೇಶ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.