ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯಲ್ಲಿರುವ ಭೋಜಗಾರ ಭೋವಿ ವಡ್ಡರ ಸಮಾಜದ ಭೋವಿ ವಡ್ಡರ ಕಾಲನಿಯಲ್ಲಿ (ಸುಣ್ಣದ ಭಟ್ಟಿ) ನೂತನವಾಗಿ ನಿಮಿರ್ಸಿದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಯವರ ನೂತನ ಶಿಲಾ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ಮಂಗಳವಾರ ಮೂರನೇ ದಿನ ಧಾನ್ಯಾಧಿವಾಸದಲ್ಲಿರಿಸುವ ಪೂಜೆ ನೆರವೇರಿಸಲಾಯಿತು.
ಪದ್ಮಶ್ರೀ ಡಾ. ಬಿ. ಮಂಜಮ್ಮ ಜೋಗತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದಲ್ಲಿ ಕಡೆಗಣಿಸಲ್ಪಟ್ಟವರು ಇಂದು ಭವ್ಯವಾದ ದೇವಸ್ಥಾನ ನಿರ್ಮಾಣ ಮಾಡಿ ಅದರಲ್ಲಿ ಅಷ್ಟೇ ವೈಭವಯುತವಾದ ದುರ್ಗಾಮಾತೆಯ ಶಿಲಾಮೂತಿರ್ಯನ್ನು ಪ್ರತಿಷ್ಠಾಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಎಲ್ಲರೂ ಇಂತಹ ದೈವ ಹಾಗೂ ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳಬೇಕು, ಸಮಾಜವನ್ನು ಸುಭದ್ರಗೊಳಿಸಬೇಕೆಂದು ನುಡಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮಾತೋಶ್ರೀ ಹುಲಿಗೆಮ್ಮ ಪೋಸಾ ಅಮ್ಮನವರು, ಧರ್ಮ ಕಾರ್ಯಗಳಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ದುರ್ಗಾ ಮಾತೆಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು.
ಆಶೀರ್ವಾದ ನೃತ್ಯ ಕಲಾ ತಂಡದ ವಿದ್ಯಾಥಿರ್ನಿಯರಿಂದ ನವಶಕ್ತಿ ವೈಭವ ನೃತ್ಯ ರೂಪಕ ನೆರವೇರಿತು. ಶ್ರೀ ಗಣೇಶ ಮತ್ತು ಶ್ರೀ ಹುಲಿಗೆಮ್ಮದೇವಿ ಭಜನಾ ಮಂಡಳಿಯವರು ಲಲಿತ ಶೋಭಾನ ಹೇಳಿ ಭಜನೆ ಮಾಡಿದರು.
ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಭೋವಿ ವಡ್ಡರ ಸಮಾಜದ ಅಧ್ಯಕ್ಷ ಬಾಬು ಬೋಜಗಾರ್, ಹಿರಿಯರಾದ ಶಿವಾಜಿ ಭೋಜಗಾರ್, ಮಹದೇವ್ ಭೋಜಗಾರ್, ಗಿರಿಯಪ್ಪ ಬಳ್ಳಾರಿ, ದಿನೇಶ್ ಭೋಜಗಾರ್, ದುರ್ಗಾದೇವಿ ಯುವಕ ಮಂಡಳ ಅಧ್ಯಕ್ಷ ಲಕ್ಷ್ಮಣ ವಡ್ಡರ ಹಾಗೂ ಪದಾಧಿಕಾರಿಗಳು, ಡಾ. ರವೀಂದ್ರ ಎಲ್ಕಾನ, ದಾನೇಶ್ವರ ಭೋಜಗಾರ, ಶ್ರೀಕಾಂತ ಭೋಜಗಾರ್, ಶೈಲಾ ಹುಟಗಿ, ಪದ್ಮಾ ದಿವಟೆ, ಶೋಭಾ ತಾಂಬೆ, ಪುಷ್ಪ ಏಕಬೋಟೆ, ಪ್ರಕಾಶ್ ಅರಗಂಜಿ, ಗುರು ಬನ್ನಿಕೊಪ್ಪ ಉಪಸ್ಥಿತರಿದ್ದರು.