ಆಲ್ದೂರು: ಪಟ್ಟಣದಲ್ಲಿ ಹಿಂದು ದುರ್ಗಾದೇವಿ ಸೇವಾ ಸಮಿತಿಯಿಂದ ಮೊದಲ ಬಾರಿಗೆ ನವರಾತ್ರಿ ಉತ್ಸವ ಆಚರಿಸಲು ತೀರ್ಮಾನಿಸಿದ್ದು, ಪಟ್ಟಣದ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ಸೆ.22ರಂದು ದುರ್ಗಾ ದೇವಿಯನ್ನು ಪ್ರತಿಷ್ಟಾಪಿಸಿ ನವರಾತ್ರಿ ಉತ್ಸವವನ್ನು ಆಚರಿಸುವ ಕುರಿತು ಹಲವು ಸಭೆಗಳು ನಡೆದು ಅಂತಿಮವಾಗಿ 11ದಿನ ದುರ್ಗಾದೇವಿಯನ್ನು ಪ್ರತಿಷ್ಟಾಪಿಸಿ ತೀರ್ಮಾನಿಸಲಾಗಿದೆ.
ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 25 ರಂದು ಸಂಜೆ 6ಗಂಟೆಗೆ ಯುವ ವಾಗ್ಮಿ ಹಾರಿಕ ಮಂಜುನಾಥ ಉಪನ್ಯಾಸ, 26ಕ್ಕೆ ಹಿರೇಮಗಳೂರು ಕಣ್ಣನ್ ಅವರಿಂದ ಸಂಸಾರ-ಸಂಸ್ಕಾರ , ಚಿಂತನ-ಮಂಥನ , 27ರಂದು ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ, ಚುಂಚ ಶೃಂಗಾ ಅಂಧರ ಕಲಾ ತಂಡದಿಂದ ಸುಗಮ ಸಂಗೀತ ಜರುಗಲಿದೆ. 30ಕ್ಕೆ ದುರ್ಗ ಹೋಮ ನಡೆಯಲಿದೆ. ಅಕ್ಟೋಬರ್ 1ರಂದು ನಮಿತ-ನಮ್ರತ ಅವರಿಂದ ಭರತನಾಟ್ಯ ಹಾಗೂ ಮಂಜುನಾಥ್ ಕಲಾ ತಂಡದವರಿಂದ ಆರ್ಕೆಸ್ಟ್ರಾ ನಡೆಯಲಿದೆ. ಅ.2ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ದುರ್ಗಾದೇವಿ ಜಲಸ್ತಂಭನದ ಅಂಗವಾಗಿ ಬೃಹತ್ ಮೆರವಣಿಗೆ ನಡೆಯಲಿದೆ. ಬೀರಂಜಿ ಹಳ್ಳದಲ್ಲಿ ದುರ್ಗಾದೇವಿ ಮೂರ್ತಿ ಜಲಸ್ತಂಭನ ನಡೆಯಲಿದೆ.