ಅಳವಂಡಿ ಸಮೀಪದ ತಿಗರಿ ಗ್ರಾಮದಲ್ಲಿ ಶ್ರೀ ಕೀರಸಿದ್ದರಾಮ ಸ್ವಾಮಿಗಳ ರಥೋತ್ಸವ ಅದ್ದೂರಿಯಿಂದ ಜರುಗಿತು. 
ಜಿಲ್ಲೆ

ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಸಮರ್ಪಣೆ

ರುದ್ರಪ್ಪ ವಾಲಿ

ಅಳವಂಡಿ: ಸಮೀಪದ ತಿಗರಿ ಗ್ರಾಮದಲ್ಲಿ ಶಿರಹಟ್ಟಿಯ ಶ್ರೀ ಫಕೀರೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವ ಸೋಮವಾರ ಸಂಜೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಭಕ್ತರು ಪೂಜೆ, ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಸಮರ್ಪಣೆ ಮಾಡಿದರು. ಸಂಜೆ 4ಕ್ಕೆ ಉಚ್ಛಾಯ ಬಳಿಕ ಶ್ರೀಸ್ವಾಮಿ ರಥೋತ್ಸವ ಜರುಗಿತು.

ಶಿರಹಟ್ಟಿಯ ಶ್ರೀ ಜ.ಕೀರಸಿದ್ದರಾಮ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹಂದ್ರಾಳದ ಶ್ರೀ ಕೀರಜ್ಜ ಉಪಸ್ಥಿತರಿದ್ದರು. ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಹರಕೆ ಸಲ್ಲಿಸಿದರು.

ಮುಖಂಡರಾದ ಸಂಗಪ್ಪ ಕವಲೂರು, ಭೀಮನಗೌಡ ಪೊಲೀಸ್ ಪಾಟೀಲ, ಬೀರಪ್ಪ ಕುಂಟಗೇರಿ, ಶೇಖರಪ್ಪ ಅಗಸಿಮನಿ, ಫಕೀರ ಶೆಟ್ಟಪ್ಪ ಕೋರಿ, ಕೊಟ್ರಪ್ಪ ಕಾತರಕಿ, ಸುರೇಶರಡ್ಡಿ, ವೀರಭದ್ರಪ್ಪ ಹಡಪದ, ಮಂಜುನಾಥ ಅಂಗಡಿ ಇತರರಿದ್ದರು.