ಜಿಲ್ಲೆ

ದುರ್ಗಾ ನಮಸ್ಕಾರ ಪೂಜೆ

ಜಗದೀಶ ಹೊಂಬಳಿ

ಧಾರವಾಡ: ಇಲ್ಲಿನ ಹನುಮಂತನಗರದ ಶ್ರೀ ಕೃಷ್ಣ, ರಾಘವೇಂದ್ರ, ಮಹಾಗಣಪತಿ ದೇವತಾ ಸಮುಚ್ಚಯದಲ್ಲಿ ಗುರುವಾರ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾದ 29ನೇ ವಾರ್ಷಿಕೋತ್ಸವ ಅಂಗವಾಗಿ ದುರ್ಗಾ ನಮಸ್ಕಾರ ಪೂಜೆ ನಡೆಯಿತು.

ಸುಬ್ರಮಣ್ಯ ಭಟ್ ಹಾಗೂ ಸುಜಯ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಪೂಜೆ ಪುನಸ್ಕಾರ ನಡೆದವು. ವಾರ್ಷಿಕೋತ್ಸವ ನಿಮಿತ್ತ ಸಮಾಜದ ಹಿರಿಯರಿಗೆ ಸನ್ಮಾನ, ಸಭಾದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, ಭಗಿನಿಯರಿಂದ ಲಕ್ಷ್ಮೀ ಶೋಭಾನೆ ಕಾರ್ಯಕ್ರಮ ನಡೆದವು. ಇದಕ್ಕೂ ಮುನ್ನ ಸದಸ್ಯರಿಗೆ ಹೂವಿನ ಅಲಂಕಾರ ಸ್ಪರ್ಧೆ, ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ್ಯಾಶನ್ ಶೋ ಹಾಗೂ ಇತರೆ ಮನೋರಂಜನಾ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಸಾಧನೆಗೈದ ಅನಘಾ ಆಚಾರ್ಯ, ಸಾಚಿ ಉರಾಳ, ಸ್ನೇಹಾ ಭಟ್ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಭಾದ ಅಧ್ಯಕ್ಷ ಚಂದ್ರಶೇಖರ ಪುರಾಣಿಕ ಮಾತನಾಡಿ, ಸಮಾಜ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು. ಸಭಾದ ವತಿಯಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಚಿಸಲಾಗಿದ್ದು ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕೋರಿದರು. ಸಭಾದ ಕಾರ್ಯದರ್ಶಿ ಅನಂತಾಚಾರ್ಯ ಉಡುಪಿ ಸಭಾ ನಡೆದು ಬಂದ ದಾರಿ ವಿವರಿಸಿದರು. ನಾಗರಾಜ ಭಟ್, ಬಿ.ಪಿ.ರಾಯ್, ಪ್ರಶಾಂತ ತಂತ್ರಿ, ಸುಜಯ ಉಡುಪಿ, ಶ್ರೀನಾಥ ಭಟ್, ಅನಂತ ಪದ್ಮನಾಭ ತಂತ್ರಿ, ಜನಾರ್ದನ ಸರಳಾಯ, ಗೋಪಿ ಉಡುಪಿ, ಮುರಳೀಧರ ಉಡುಪಿ, ಅನಂತಕೃಷ್ಣ ಕಾರಂತ, ಪದ್ಮನಾಭ ಉಡುಪಿ, ಗುರುರಾಜ ಭಟ್, ಸರ್ವೋತ್ತಮ ಕಾರಂತ, ಶ್ರೀಧರರಾವ್ ಕಿದಿಯೂರ, ಅನಂತಪದ್ಮನಾಭ ತಂತ್ರಿ, ವಾಣಿ ಉಡುಪಿ, ಪ್ರಮೀಳಾ ಪುರಾಣಿಕ, ಇಂದಿರಾಬಾಯಿ ಪುರಾಣಿಕ, ಡಾ.ಕೃಷ್ಣಮೂರ್ತಿ ಕಿದಿಯೂರ, ಗೋಪಿನಾಥ ಕಿದಿಯೂರ ಇತರರಿದ್ದರು. ನಾಗರಾಜ ಭಟ್ ಸ್ವಾಗತಿಸಿದರು. ವಂದನಾ ಆಚಾರ್ಯ ನಿರೂಪಿಸಿದರು. ಪೂರ್ಣಿಮಾ ಉಪಾಧ್ಯಾಯ ವಂದಿಸಿದರು.