ಧಾರವಾಡ: ನವರಾತ್ರಿ ಪ್ರಯುಕ್ತ ದುರ್ಗಾ ದೌಡ್ ಆಚರಣಾ ಸಮಿತಿಯಿಂದ ನಗರದಲ್ಲಿ ಮಂಗಳವಾರ ದುರ್ಗಾ ಮಾತಾ ದೌಡ್ ಜರುಗಿತು. ಇಲ್ಲಿನ ಕಿಲ್ಲಾ ಪ್ರದೇಶದ ಶ್ರೀ ದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಆರ್‌ಎಸ್‌ಎಸ್ ಮುಖಂಡ ಶ್ರೀಧರ ನಾಡಿಗೇರ ದೌಡ್‌ಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಹಿಂದು ಧರ್ಮ ಉಳಿಸಿ ಬೆಳಸುವ ಕಾರ್ಯಕ್ಕೆ ಶ್ರಮಿಸೋಣ. ನಾವೆಲ್ಲ ಹಿಂದು; ನಾವೆಲ್ಲ ಒಂದು ಎಂಬ ಭಾವನೆ ಮೂಡಿಸಿ ಹಿಂದುಗಳನ್ನು ಬೇರ್ಪಡಿಸುವ ಕೆಲಸ ಮಾಡುವವರನ್ನು ತಡೆಯೋಣ ಎಂದರು.
ಶ್ರೀ ದುರ್ಗಾ ದೇವಿ ದೇವಸ್ಥಾನದದಿಂದ ಹೊರಟ ದೌಡ್, ಗುಲಗಂಜಿಕೊಪ್ಪ ದ್ಯಾಮವ್ವನ ಗುಡಿಯವರೆಗೆ ಸಾಗಿತು.
ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಸದಸ್ಯರಾದ ಶಂಕರ ಶೆಳಕೆ, ನಿತಿನ ಇಂಡಿ, ಆನಂದ ಯಾವಗಲ್, ಮುಖಂಡರಾದ ಮೋಹನ ರಾಮದುರ್ಗ, ಮಂಜು ನಡಟ್ಟಿ, ರಾಕೇಶ ನಾಝರೆ, ಶರಣಬಸವ ಅಂಗಡಿ, ಮಹಾಂತೇಶ ಸೀಮಿಕೇರಿಮಠ, ಸಿದ್ದು ಕಲ್ಯಾಣಶೆಟ್ಟಿ, ಪ್ರಮೋದ ಕಾರಕೂನ ಹಾಗೂ ಮಹಿಳೆಯರು, ಯುವಕರು ಭಗವಾಧ್ವಜದೊಂದಿಗೆ ಹೆಜ್ಜೆ ಹಾಕಿದರು.