ಬಾದಾಮಿ: ತಾಲೂಕಿನ ಹಾನಾಪೂರ ಎಲ್.ಟಿ. (ಸರಸ್ವತಿ ನಗರ) ಗ್ರಾಮದಲ್ಲಿ ಏ.6ರಿಂದ 8ರ ವರೆಗೆ ದುರ್ಗಾದೇವಿ ಹಾಗೂ ಸೇವಾಲಾಲ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುವುದು ಎಂದು ದುರ್ಗಾದೇವಿ ಹಾಗೂ ಸಂತ ಸೇವಾಲಾಲ ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ಕೃಷ್ಣಾಜಿ ಚವಾಣ ತಿಳಿಸಿದರು.
ಇಲ್ಲಿನ ಕಾನಿಪ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.6ರಂದು ಭಾನುವಾರ ಉತ್ಸವ-1ರ ಅಂಗವಾಗಿ ಅಂದು ಬೆಳಗ್ಗೆ 11 ಗಂಟೆಗೆ ಗುಳೇದಗುಡ್ಡದ ಅಂಭಾ ಭವಾನಿ ದೇವಸ್ಥಾನದಿಂದ ಕಳಸ ಹಾಗೂ ಕುಂಭಮೇಳ ಮೆರವಣಿಗೆಯು ಬಾದಾಮಿ ನಾಕಾ ಮಾರ್ಗವಾಗಿ ಹಾನಾಪುರ ಎಲ್.ಟಿ. ವರೆಗೆ ನಡೆಯಲಿದೆ. ನೀಲಾನಗರ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು ಚಾಲನೆ ನೀಡುವರು.
ಸಂಜೆ 6.30ರಿಂದ 7ಗಂಟೆಯ ವರೆಗೆ ಬಿ.ಐ. ರಾಠೋಡ ತಂಡದವರಿಂದ ಹಾಗೂ 7ರಿಂದ 7.30ರ ವರೆಗೆ ಸ್ಥಳೀಯ ಕಲಾವಿದರಿಂದ ಲಂಬಾಣಿ ಭಜನೆ ಕಾರ್ಯಕ್ರಮ, ಸಂಜೆ 8 ಗಂಟೆಗೆ ಸೈನಿಕರು, ಪ್ರತಿಭಾವಂತ ವಿದ್ಯಾರ್ಥಿ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ರಾಜಶೇಖರ ಶೀಲವಂತರ, ಜಿಪಂ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ, ಹೊಳಬಸು ಶೆಟ್ಟರ, ಮಹೇಶ ಬಿಜಾಪುರ, ಜಗದೀಶ ಹಿರೇಗೌಡರ ಮಂಗಳಾ ಆಗಮಿಸುವರು.
ರಾತ್ರಿ 10.30ಗಂಟೆಗೆ ಧಾರವಾಡ ಸಮುದಾಯ ಕಲಾವಿದರಿಂದ ಗಂಟೆ ರಾಜಾ ಎಂಬ ಹಾಸ್ಯ ಪ್ರಧಾನ ನಾಟಕ ಹಾಗೂ ರಾತ್ರಿ 12 ಗಂಟೆಗೆ ಬಂಜಾರ ಭಜನಾ ಕಾರ್ಯಕ್ರಮ ನಡೆಯಲಿದೆ.
ಏ.7ರಂದು ಸೋಮವಾರ ಉತ್ಸವ-2 ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಶ್ರೀಮಾತಾ ದುರ್ಗಾದೇವಿಯ ಅಭಿಷೇಕ, ಆರಾಧನೆ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ಬಂಜಾರ ಜಾಗೃತಿ ವಿಚಾರಗೋಷ್ಠಿ ನಡೆಯಲಿದೆ. ಒಪ್ಪತ್ತೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಹರಿಲಾಲ್ ಪವಾರ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಪ್ರೊ.ಡಿ.ಬಿ.ನಾಯಕ, ರವಿಕಾಂತ ಅಂಗಡಿ, ಚಂದ್ರಹಾಸ ಚವಾಣ, ಪಾಂಡು ಲಮಾಣಿ ಭಾಗವಹಿಸಿವರು. ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೈಲಾಸಪತಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ. ಗದ್ದಿಗೌಡರ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮುಖಂಡರಾದ ಎಸ್.ಟಿ. ಪಾಟೀಲ, ಅನಂತ ನಾಯ್ಕ, ಮಹಾಂತೇಶ ಮಮದಾಪೂರ, ಮಹೇಶ ಹೊಸಗೌಡ್ರ, ಕುಮಾರಗೌಡ ಜನಾಲಿ, ಕೇಶವ ಪೆಟ್ಲೂರ, ಕರೆಪ್ಪ ಬನ್ನೆ ಭಾಗವಹಿಸುವರು. ನಂತರ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ.
ಏ.8ರಂದು ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಗುರುಹಿರಿಯರಿಗೆ ಸನ್ಮಾನ ನಡೆಯಲಿದೆ. ರಾತ್ರಿ 10.30 ಗಂಟೆಗೆ ರೈತ ನಕ್ಕರೆ ಜಗವೆಲ್ಲ ಸಕ್ಕರೆ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸದರಿ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ ಗ್ರಾಮದ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪ್ರಕಾಶ ರಾಠೋಡ, ಮನೋಹರ ರಾಠೋಡ, ಬಿ.ಎಂ. ರಾಠೋಡ, ಪಿ.ಬಿ. ಚವಾಣ, ಹುಲ್ಲಪ್ಪ ಚವಾಣ, ಪಿ.ಬಿ.ನಾಯಕ ಹಾಜರಿದ್ದರು.