filter: 0; fileterIntensity: 0.0; filterMask: 0; module: a; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 85.94183; hist255: 0.0; hist252~255: 0.0; hist0~15: 0.0; 
ಜಿಲ್ಲೆ

ದುಗ್ಗಹಳ್ಳಿ ಗ್ರಾ.ಪಂಗೆ ಕೊಂಗಳ್ಳಿ ಬಿ. ಶಂಕರ್ ಅಧ್ಯಕ್ಷ

ಹುಲ್ಲಹಳ್ಳಿ: ಹೋಬಳಿಯ ದುಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೊಂಗಳ್ಳಿ ಬಿ.ಶಂಕರ್ ಅವರು ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 15 ಸದಸ್ಯರ ಬಲದ ಗ್ರಾಮ ಪಂಚಾಯಿತಿಯ ಚುನಾವಣೆ ಪ್ರಕ್ರಿಯೆಯಲ್ಲಿ ಕೊಂಗಳ್ಳಿ ಬಿ.ಶಂಕರ್ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಬಿ.ಶಂಕರ್ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾ ಅಧಿಕಾರಿಯಾದ ನೀರಾವರಿ ಇಲಾಖೆಯ ಕೃಷ್ಣ ಅಧಿಕೃತವಾಗಿ ಘೋಷಿಸಿದರು.

ನೂತನ ಅಧ್ಯಕ್ಷ ಬಿ.ಶಂಕರ್ ಮಾತನಾಡಿ, ಅಧ್ಯಕ್ಷರಾಗಲು ನನಗೆ ಎಲ್ಲ ಸದಸ್ಯರು ಸಹಕಾರ ನೀಡಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕುಡಿಯುವ ನೀರು ವಿದ್ಯುತ್, ಒಳಚರಂಡಿ ಮುಂತಾದ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಗ್ರಾಂಪಂ ಉಪಾಧ್ಯಕ್ಷೆ ಪದ್ಮಾ, ಸಿ.ಗುರುಪ್ರಸಾದ್, ಕೃಷ್ಣ, ಸುಮಲಾಂಬಿಕಾ, ವೃಷಭೇಂದ್ರ, ಚಿನ್ನಸ್ವಾಮಿ ನಾಯ್ಕ, ಕಮಲಮ್ಮ, ಜಯಮ್ಮ, ಕುಸುಮಾ, ನಂಜುಂಡ ನಾಯಕ, ಸುಧಾಮಣಿ, ಲಕ್ಷ್ಮೀ, ಮುಖಂಡರಾದ ತಮ್ಮಣ್ಣಗೌಡ, ಕುರಿಹುಂಡಿ ಆನಂದ್, ರಾಜಣ್ಣ, ಶಿವಪ್ಪ, ರೇವಣ್ಣ, ಎಸ್.ಎಂ.ಕುಮಾರ್, ಕೇಶವ, ಸಂದೇಶ್, ಜವರೇಗೌಡ, ಶಿವು ಸಾಂಗ್ಲಿ, ಮಹೇಶ್, ಹಾಲಪ್ಪ, ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.