ಸೋಮವಾರಪೇಟೆ ಪಟ್ಟಣದಲ್ಲಿ ದಫ್ ಮೆರವಣಿಗೆ ನಡೆಯಿತು. 
ಜಿಲ್ಲೆ

ಸೋಮವಾರಪೇಟೆಯಲ್ಲಿ ದಫ್ ಮೆರವಣಿಗೆ

ಸೋಮವಾರಪೇಟೆ : ಪಟ್ಟಣದ ಹನಫೀ ಜಾಮಿಯಾ ಮಸೀದಿಯ ಹಝ್ರತ್ ಮಸ್ತಾನ್ ಮಲಂಗ್ ಷಾವಲಿ ಉರುಸ್ ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು. ಮಸೀದಿಯಲ್ಲಿ ಗಂಧ ಮಹೋತ್ಸವ ನಡೆದು, ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಫಕೀರರ ಝರಬ್ ಮೆರವಣಿಗೆ ನಡೆಯಿತು. ರಾಮನಗರ ಹಾಗೂ ಸ್ಥಳೀಯ ಯುವಕರಿಂದ ದಫ್ ನಡೆಯಿತು. 8ಗಂಟೆಗೆ ಧಾರ್ಮಿಕ ಪ್ರವಚನ ನಡೆಯಿತು. ಸೋಮವಾರಪೇಟೆ ಹನಫಿ ಜಾಮಿಯಾ ಮಸೀದಿಯ ಖತೀಬರಾದ ಆಝಂ ರಝಾ, ಕಾಜೂರ್ ಹುಲ್ಲೇಹಳ್ಳಿ ಹಝ್ರತ್‌ನ ಸಂಶುದ್ದೀನ್ ಝರ‌್ರಿ, ಮೈಸೂರಿನ ಯಾಸೀರ್ ಅಖ್ತಾರಿ ಅವರು ಪ್ರವಚನ ನೀಡಿದರು. ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಬಷೀರ್, ಉಪಾಧ್ಯಕ್ಷ ರಹಿಂ ಬೇಗ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಚಿ ಇನಾಯತ್ ಖಾನ್ ಸೇರಿದಂತೆ ಸಮಾಜದ ನೂರಾರು ಜನ ಊರುಸ್ ಸಂಭ್ರಮದಲ್ಲಿ ಪಾಲ್ಗೊಂಡರು. ನಂತರ ಅನ್ನದಾನ ನಡೆಯಿತು.