ಕಡೂರು: ತಾಲೂಕಿನ ಕೆಲ ಗ್ರಾಮ ಆಡಳಿತ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷೃ ಹಿನ್ನಲೆಯಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಡೆಹಿಡಿದು ಆದೇಶಿಸಿದ್ದಾರೆ.
ಸರ್ಕಾರಿ ಜಮೀನುಗಳ ಅನಧಿಕೃತ ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಲ್ಯಾಂಡ್ ಬಿಟ್ ತಂತ್ರಾಶ ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಪಹಣಿಗಳಿಗೆ ಆಧಾರ್‌ಲಿಂಕ್ ಮಾಡಲು ಆಧಾರ್ ಸೀಡಿಂಗ್ ಮತ್ತು ರೈತರ ಜಮೀನುಗಳ ಪೋಡಿ ಕಾರ್ಯ ನಿರ್ವಹಿಸಲು ನಮೂನೆ-1 ರಿಂದ 5ರ ತಂತ್ರಾಂಶವನ್ನು ಸರ್ಕಾರ ಅಭಿವೃದ್ಧಿ ಪಡಿಸಿ ಸರ್ಕಾರದ ಸೌಲಭ್ಯಗಳನ್ನು ಲಾನುಭವಿಗಳಿಗೆ ಒದಗಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು.
ಜ.23ರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಕುರಿತು ಯಾವುದೇ ಪ್ರಗತಿ ಸಾಧಿಸದ ಎಂ.ಎಸ್.ರಘುರಾಮ್(ಬ್ಯಾಲದಾಳು ವೃತ್ತ), ಟಿ.ಎಂ. ಶಿವಕುಮಾರ್(ಸಿಂಗಟಗೆರೆ ವೃತ್ತ ), ಟಿ.ಮೋಹನ್(ಕಾಮೇನಹಳ್ಳಿ ವೃತ್ತ ), ಗೋಣಿ ಬಸಪ್ಪ(ಚೌಳಹಿರಿಯೂರು ವೃತ್ತ ), ಹರೀಶ್‌ಕುಮಾರ್(ಹಡಗಲು ವೃತ್ತ ), ಅಶೋಕ್ ್ರಾನ್ಸಿಸ್ (ಯಗಟಿ ವೃತ್ತ ), ಬಾರಿಕರ ಮೈಲಾರಪ್ಪ(ಬಾಣೂರು ವೃತ್ತ ), ಕೆ.ಆರ್. ರವಿ(ತಂಗಲಿ ವೃತ್ತ ), ಮುತ್ತಪ್ಪ ದಶರಥ ಸಂಗೋಗಿ(ಸೋಮನಹಳ್ಳಿ ವೃತ್ತ ), ಸಂತೋಷ್‌ಕುಮಾರ್(ಹುಳಿಗೆರೆ ವೃತ್ತ ),ಎಸ್. ಹರೀಶ್‌ಕುಮಾರ್(ಆಸಂಧಿ ವೃತ್ತ ), ಅಂಬರೀಶ(ವಕ್ಕಲಗೆರೆ ವೃತ್ತ ), ಜಿ.ಎಸ್.ದಿನೇಶ (ವಿ.ಯರದಕೆರೆ ವೃತ್ತ ), ಬಿ.ಎಸ್. ಪ್ರಿಯಾಂಕ(ಸರಸ್ವತಿಪುರ ವೃತ್ತ ), ಎಸ್.ಎಚ್.ಓಂಕಾರ(ನಿಡಘಟ್ಟ ವೃತ್ತ ), ಸುರೇಶ್ ಘಂಟಿ(ಪುರ ವೃತ್ತ ), ಎಚ್.ಸಿದ್ದಪ್ಪ(ಬಿಳುವಾಲ ವೃತ್ತ ), ವಿರೇಶ ತರವಂದ(ನಾಗರಾಳು ವೃತ್ತ ), ಎಚ್.ಆರ್. ವೆಂಕಟೇಶ್(ಬಿಸಲೆರೆ ವೃತ್ತ ), ಜೆ.ನವೀನ್(ಚಿಕ್ಕಿಂಗಳ ವೃತ್ತ ) ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯದಲ್ಲಿ ಅಸಡ್ಡೆ ಪ್ರದರ್ಶಿಸಿರುವ ಹಿನ್ನಲೆಯಲ್ಲಿ ವಾರ್ಷಿಕ ವೇತನ ತಡೆಹಿಡಿಯುವ ದಂಡನೆ ವಿಧಿಸಿದ್ದಾರೆ.