ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಅವರನ್ನು ಸತ್ಕರಿಸಲಾಯಿತು. ನೇಮಿನಾಥ ಖೇಮಲಾಪೂರೆ, ಎಸ್.ಎಂ.ಪಾಟೀಲ, ಕಿರಣ ಮಸರಗುಪ್ಪಿ, ಅಲ್ಲಪ್ಪ ಮಂಜರಗಿ ಇತರರಿದ್ದರು. 
ಜಿಲ್ಲೆ

ವಿದ್ಯುತ್ ಕೊರತೆಯಿಂದ ರೈತ ಕಂಗಾಲು

ಹುಕ್ಕೇರಿ: ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ ತುಂಬಿ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಲಾಭ ಪಡೆಯಬೇಕು ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

ತಾಲೂಕಿನ ಅಮ್ಮಣಗಿ ಗ್ರಾಮದ ನೇರಲಿ ರೋಡ್ ಬಳಿ ಭಾನುವಾರ ಅಳವಡಿಸಿದ 63 ಕೆವಿ ಹೆಚ್ಚುವರಿ ನಡಗೇರಿ ಟಿಸಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಗ್ರಾಹಕರು ಆನ್‌ಲೈನ್ ಮೂಲಕ ಅಥವಾ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಬಿಲ್ ಪಾವತಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ನೀರು ಹಾಗೂ ಕಲ್ಲಿದ್ದಲು ಕೊರತೆಯಿಂದ ರಾಜ್ಯ ಸರ್ಕಾರ ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸಮಸ್ಯೆ ಪರಿಹಾರಕ್ಕಾಗಿ ಸಂಘದ ಆಡಳಿತ ಮಂಡಳಿ ವತಿಯಿಂದ ಇಂಧನ ಇಲಾಖೆ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಗ್ರಾಹಕರು, ರೈತರು ಮತ್ತು ವಿದ್ಯಾರ್ಥಿಗಳು ಸಹಕರಿಸಬೇಕು ಎಂದರು. ರೈತರು ಪವನ ಕತ್ತಿ ಅವರನ್ನು ಸತ್ಕರಿಸಿದರು. ಗ್ರಾಪಂ ಸದಸ್ಯರಾದ ಮಲ್ಲಪ್ಪ ರಾಜಾಪೂರ ಮತ್ತು ದಸ್ತಗೀರಸಾಬ್ ನದ್ಾ ಟಿಸಿ ಉದ್ಘಾಟಿಸಿದರು. ಸ್ಥಾನಿಕ ಇಂಜಿನಿಯರ್ ನೇಮಿನಾಥ ಖೇಮಲಾಪೂರೆ, ಮುಖಂಡರಾದ ಎಸ್.ಎಂ.ಪಾಟೀಲ, ಕಿರಣ ಮಸರಗುಪ್ಪಿ, ಅಲ್ಲಪ್ಪ ಮಂಜರಗಿ, ಸಿದ್ದಪ್ಪ ನಡಗೇರಿ, ಸೋಮಣ್ಣ ನಾಗೌಡ, ಪ್ರಶಾಂತ ಪಾಟೀಲ ಇತರರಿದ್ದರು.