ಜಿಲ್ಲೆ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ನರೇಶ್ ಕುಮಾರ್

ಸಿಂಧನೂರು: ತಾಲೂಕಿನ ಜಂಗಮರಹಟ್ಟಿಯಲ್ಲಿ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಶಂಕರಪ್ಪ ಮಲ್ಲಪ್ಪ ಅಡ್ಡೇರ್ (48) ಮೃತ.

ಶಂಕರಪ್ಪ ತಾಯಿಯ ಹೆಸರಿನಲ್ಲಿರುವ 3.18 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು.ಜವಳಗೇರಾ ಗ್ರಾಮದ ಕೆನರಾ ಬ್ಯಾಂಕಿನಲ್ಲಿ 1.30 ಲಕ್ಷ ರೂ. ಹಾಗೂ ಖಾಸಗಿಯಾಗಿ 6 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.

ಹೆಂಡತಿ, ಮಕ್ಕಳು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಶಂಕರಪ್ಪ ಜಂಗಮರಹಟ್ಟಿಯಲ್ಲಿ ವಾಸ ಮಾಡುತ್ತಿದ್ದರು. ಸಾಲಬಾಧೆ ತಾಳದೆ ಭಾನುವಾರ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪುತ್ರ ಬಸವಲಿಂಗ ನೀಡಿದ ದೂರಿನ ಮೇರೆಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.