ಮಂಡ್ಯ: ಮಕ್ಕಳು ಸರ್ಕಾರದಿಂದ ಸಿಗುವ ಸೌಲಭ್ಯ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸಲಹೆ ನೀಡಿದರು.
ತಾಲೂಕಿನ ದುದ್ದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದುದ್ದ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆ, ಮಕ್ಕಳ ಹಾಗೂ ಅಂಗವಿಕಲರ ಗ್ರಾಮಸಭೆಯಲ್ಲಿ ಮಾತನಾಡಿದರು. ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲರು ತಮ್ಮ ಸಮಸ್ಯೆಗಳನ್ನು ಗ್ರಾಮಸಭೆ ಮೂಲಕ ಗಮನಕ್ಕೆ ತಂದರೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಬಗೆಹರಿಸಬಹುದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೌಭಾಗ್ಯ ಮಾತನಾಡಿದರು. ದುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಶ್ರೇಯಸ್‌ಗೌಡ ಸಭೆ ಉದ್ಘಾಟಿಸಿದರು. ಸದಸ್ಯರಾದ ಡಿ.ಎಂ.ರಾಮಚಂದ್ರ, ವೆಂಕಟಗಿರಿ, ಬಸಲಿಂಗಪ್ಪ, ಲಕ್ಷ್ಮಣ್, ಯಶೋದಮ್ಮ, ಲಕ್ಷ್ಮಮ್ಮ, ಬಸಮಣ್ಣಿ, ಪದ್ಮಾ, ಪಿಡಿಒ ಶಿವಲಿಂಗೇಗೌಡ, ಕಾರ್ಯದರ್ಶಿ ನಾರಾಯಣ, ಗ್ರಂಥಪಾಲಕ ರಮೇಶ್ ಸೇರಿದಂತೆ ಗ್ರಾಪಂ ಸಿಬ್ಬಂದಿ, ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇತರರಿದ್ದರು.