ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಯುಎಇ ದುಬೈ ಘಟಕ ಮತ್ತು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ದುಬೈಯಲ್ಲಿ ‘ದುಬೈ ಗಡಿನಾಡ ಉತ್ಸವ-2024’ ಇತ್ತೀಚೆಗೆ ಜರುಗಿತು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಡಿನಾಡ ಉತ್ಸವವನ್ನು ಆಕ್ಮೇ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್ ಶೇರಿಗಾರ್ ಉದ್ಘಾಟಿಸಿದರು. ಅಧ್ಯಕ್ಷತೆ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇಯ ಸಲಹ ಸಮಿತಿ ಅಧ್ಯಕ್ಷ ಅಶ್ರಫ್ ಶಾ ಮಂತೂರು ವಹಿಸಿದ್ದರು.
ಸಮಾಜದ ಸಾಧಕರಾದ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ಸತೀಶ್ ಪೂಜಾರಿ, ಉದ್ಯಮಿ ಸಮಾಜ ಸೇವಕ ರೊನಾಲ್ಡೊ ಮಾರ್ಟಿಸ್, ಸಮಾಜ ಸೇವಕ ಶಿವಶಂಕರ ನೆಕ್ರಾಜೆ, ಉದ್ಯೋಗಿ ಕೆ.ಸಿ. ಲಿತೇಶ್ ಕುಮಾರ್ ಕುಂಬ್ಳೆ ಅವರನ್ನು ಸನ್ಮಾನಿಸಲಾಯಿತು. ಯುಎಇಯ ಶ್ರೇಷ್ಠ ಸಂಘಟನಾ ಪುರಸ್ಕಾರವನ್ನು ಯುಎಇಯ ಕನ್ನಡ ಪರ ಸಂಸ್ಥೆಯಾದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ದಿ ಸ್ಪೀಚ್ ಕ್ಲಿನಿಕ್ ದುಬೈ ಸಂಸ್ಥೆಗಳನ್ನೂ ಸನ್ಮಾನಿಸಿ ಗೌರವಿಸಲಾಯಿತು. ಅಲ್ ಫರ್ಹಾನ್ ಎಕ್ಸ್ಚೇಂಜ್ ನಾ ಗುರುಪ್ರಸಾದ್ ಮಂಜೇಶ್ವರ, ರವಿ ರಾಜ್ ಶೆಟ್ಟಿ ಕಾಸರಗೋಡು, ಸಂದೀಪ್ ಜೆ.ಅಂಚನ್ ಮೂಲ್ಕಿ, ರಶೀದ್ ಬಾಯಾರ್, ಅಯೂಬ್ ಅಟ್ಟೆಗೋಳಿ, ಸಿದ್ಧಿಖ್ ಅಜ್ಮಾನ್, ರಿಯಾಝ್ ಅಹಮ್ಮದ್ ಗುಲ್ ಫರಾಸ್, ಅಬ್ದುಲ್ಲ ಕಾಂಡೆಲ್ ಪಚ್ಚಂಬಳ, ಮುನೀರ್ ಪಾರ ಕುಟಿಜಜಿಟಿಜಣೂರು ಉಪಸ್ಥಿತರಿದ್ದರು. ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಸ್ವಾಗತಿಸಿ, ಅಶ್ರಫ್ ಪಿ.ಪಿ.ಬಾಯಾರ್ ವಂದಿಸಿದರು.
ಚಲನಚಿತ್ರ ಗಾಯಕಿ ಪುಷ್ಪ ಆರಾದ್ಯ ಮತ್ತು ಗಡಿನಾಡ ಗಾಯಕ ಗಾಯಕಿಯರಿಂದ ಸಂಗೀತ ರಸ ಸಂಜೆ ನಡೆಯಿತು. ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು.