ಬೆಳಗಾವಿ: ನಗರದಲ್ಲಿ ಗೋವಾ ಮದ್ಯ ಸಾಗಾಣಿಕೆ ವಾಹನಗಳ ಮೇಲೆ ದಾಳಿ ಮುಂದುವರಿಸಿರುವ ಅಬಕಾರಿ ಅಧಿಕಾರಿಗಳು ಬುಧವಾರ 1 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ.
ನಗರದ ಸುಭಾಷ ಎಸ್.ಡಿ.ಎಂಬುವವರ ವಿರುದ್ಧ ಕ್ರಮ ದಾಖಲಾಗಿದೆ.ಹಳೆಯ ಪಿಬಿ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ಕೆಳಗಡೆ ಅಕ್ರಮವಾಗಿ ಗೋವಾ ರಾಜ್ಯದ ಮಧ್ಯವನ್ನು ಸಾಗಾಣಿಕೆ ಮಾಡಿ ಟಾಟಾ ಇಂಡಿಕಾ ವಾಹನ ಸಂಗ್ರಹಿಸಿಯಿಟ್ಟಿದರು. ಬಳಿಕ ಬೇಡಿಕೆ ಅನುಗುಣವಾಗಿ ನಗರದ ವಿವಿಧ ಕಡೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 87 ಬಾಟಲಿಗಳನ್ನು (65.250 ಲೀ) ವಶಪಡಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ 1 ಲಕ್ಷ ರೂ. ಮೌಲ್ಯದ ಮದ್ಯ, 1.50 ಲಕ್ಷ ರೂ. ಮೌಲ್ಯದ ವಾಹನ ಸೇರಿ 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.