ಜಿಲ್ಲೆ

ಜು.3ರಂದು ಜನಾಗ್ರಹ ಪ್ರತಿಭಟನಾ ಮೆರವಣಿಗೆ: ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ದಲಿತ, ಶೋಷಿತ ಅಭ್ಯುದಯಕ್ಕೆ ಬಜೆಟ್ ನೀಡುವುದು ಹಾಗೂ ಅವಕಾಶ ವಂಚಿತರಿಗೆ ತಾತ್ಕಾಲಿಕ ಪರಿಹಾರಗಳ ಗ್ಯಾರಂಟಿ ನಿಲ್ಲಿಸಿ ಶಾಶ್ವತ ಪರಿಹಾರ ಸೇರಿದಂತೆ ಇತರೆ ಹಕ್ಕೋತ್ತಾಯಗಳನ್ನು ಈಡೇರಿಸಲು ಒತ್ತಾಯಿಸಿ ಜು.3ರಂದು ನಗರದಲ್ಲಿ ಜನಾಗ್ರಹ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ನ್ಯಾಯ ನೀತಿ ಎಂಬ ಘೋಷಣೆಯೊಂದಿಗೆ ಬೆಳಗ್ಗೆ 11 ಗಂಟೆಗೆ ರೈತ ಸಭಾಂಗಣದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ದಸಂಸ ಸಂಸ್ಥಾಪಕ ಪ್ರೊ.ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ಭೂ ರಹಿತ ದುಡಿಯುವ ವರ್ಗಕ್ಕೆ ಭೂಮಿ ಹಂಚಿಕೆಗೆ ಒತ್ತಾಯ, ಕಾಂತರಾಜ ಅರಸ್ ಆಯೋಗ ನಡೆಸಿರುವ ಜಾತಿ ಗಣತಿ ಅಂಗೀಕಾರಕ್ಕೆ ಒತ್ತಾಯ ಸೇರಿದಂತೆ ಶೋಷಿತ ಜನಾಂಗದ ಹಲವು ಹಕ್ಕೊತ್ತಾಯಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘಟನೆಯ ಮುಖಂಡರಾದ ಅನಿಲ್ಕುಮಾರ್, ಸೋಮಶೇಖರ್, ಆನಂದ್, ಶ್ರೀನಿವಾಸ್ ಇದ್ದರು.