ಬೈಲಕುಪ್ಪೆ: ನೊಂದವರಿಗೆ ಬೆಂಬಲವಾಗಿ ನಿಂತು ಪ್ರತಿಯೊಂದು ಹಳ್ಳಿಯಲ್ಲೂ ಸಂಘಟನೆ ಮಾಡುವುದರಿಂದ ಸಾಮಾಜಿಕ ಪ್ರಗತಿ ಸಾಧ್ಯ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಐಲಾಪುರ ರಾಮು ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಾರನಹಳ್ಳಿ ಹೋಬಳಿ ದಸಂಸ ಕಾರ್ಯಕಾರಿಣಿ ಸಮಿತಿ ಸಭೆ ,ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಟ್ಟೆ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ದಸಂಸ ಹೋರಾಡುತ್ತಿದೆ. ಇದಕ್ಕೆ ಸಂಘಟನೆಯ ಎಲ್ಲರೂ ಸಹಕಾರ ನೀಡಬೇಕು ಎಂದರು. ಮುಖಂಡರಾದ ಕರಡಿಪುರ ಕುಮಾರ, ನಿರಂಜನ, ಹೇಮಂತ, ರಾಜ್ ಮಾತನಾಡಿದರು.
ಆಯ್ಕೆ : ಹಾರನಹಳ್ಳಿ ಹೋಬಳಿ ಕಾರ್ಯಕಾರಿಣಿ ಸಮಿತಿಗೆ ಪ್ರಧಾನ ಸಂಚಾಲಕ ಚಂದ್ರು, ಖಜಾಂಚಿ ಚಂದ್ರು, ಸಂಘಟನಾ ಸಂಚಾಲಕ ದೇವರಾಜ್, ಲಕ್ಷ್ಮಣ. ಹರೀಶ, ಬಸವರಾಜು, ನಾಗರಾಜು, ದಯಾನಂದ, ರಾಜಪ್ಪ, ಶಿವರುದ್ರ, ಸಂಘಟನೆ ಗೌರವ ಸಲಹೆಗಾರರಾಗಿ ಬಸವರಾಜು, ಚೆನ್ನಯ್ಯ. ಸಣ್ಣ ಜಾವರಯ್ಯ. ರಂಗನಾಥ, ರಾಮಣ್ಣ ಅವರನ್ನು ಆಯ್ಕೆ ಮಾಡಲಾಯಿತು.ಮುಖಂಡರಾದ ಅವರ್ತಿ ಸೋಮಶೇಖರ, ನಾಳಪುರದ ವಸಂತ, ನಾರಾಯಣ. ದಯಾನಂದ , ಜಯಂತಿ ಸೋಮಶೇಖರ್, ಗೋಪಾಲ ಇತರರು ಇದ್ದರು.