ಚಿಕ್ಕಮಗಳೂರು ಜಿಲ್ಲೆ ಕಡೂರು ಶಿರಸ್ತೇದಾರ್ ನಾಗರತ್ನ ಅವರಿಗೆ ಮನವಿ ಸಲ್ಲಿಸಿದ ಡಿಎಸ್ ಎಸ್ ಮುಖಂಡರು ಮೂರುವರೆ ದಶಕಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿರುವ ಕಡೂರು ತಾಲೂಕು ಬೆಳಗುತ್ತಿ ಗ್ರಾಮದ ಸರ್ವೇ ನಂಬರ್ ೭೦ರಲ್ಲಿರುವ ದಲಿತ ಕುಟುಂಬಕ್ಕೆ ಸಾಗುವಳಿ ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು. ಅಶೋಕ್ ರಾಜರತ್ನಂ, ಎಚ್.ಎಸ್.ಪುಟ್ಟಸ್ವಾಮಿ, ನಾಗರಾಜ್ ಮತ್ತಿತರರಿದ್ದರು. 
ಜಿಲ್ಲೆ

ಜಮೀನಿನ ಸಾಗುವಳಿ ಪತ್ರ ವಿತರಿಸಲು ಡಿಎಸ್ ಎಸ್ ಒತ್ತಾಯ

ಚಿಕ್ಕಮಗಳೂರು: ಮೂರುವರೆ ದಶಕಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿರುವ ಕಡೂರು ತಾಲೂಕು ಬೆಳಗುತ್ತಿ ಗ್ರಾಮದ ಸರ್ವೇ ನಂಬರ್ ೭೦ರಲ್ಲಿರುವ ದಲಿತ ಕುಟುಂಬಕ್ಕೆ ಸಾಗುವಳಿ ಪತ್ರ ವಿತರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಕಡೂರು ತಾಲೂಕು ಶಿರಸ್ತೇದಾರ್ ನಾಗರತ್ನ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪಿ.ಟಿ.ಚಂದ್ರಶೇಖರ್, ಕಡೂರು ತಾಲೂಕಿನ ಬೆಳ್ಳಿಗುತ್ತಿ ಗ್ರಾಮದ ಸರ್ವೆ ನಂ.೭೦ರಲ್ಲಿ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಪಾರ್ವತಮ್ಮ ಎಂಬುವವರು ಹಲವಾರು ಕಾಲಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕಾರಣ ಕೂಡಲೇ ಸಾಗುವಳಿ ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಅನೇಕ ವರ್ಷಗಳಿಂದ ಜಮೀನು ಸಾಗುವಳಿಯಲ್ಲಿ ತೊಡಗಿರುವ ಪಾರ್ವತಮ್ಮರಿಗೆ ಹೀಗಿರುವ ಜಮೀನು ಹೊರತುಪಡಿಸಿ ಬರ‍್ಯಾವ ಆಸ್ತಿ ಇರುವುದಿಲ್ಲ. ದಿನನಿತ್ಯ ವ್ಯವಸಾಯದಲ್ಲಿ ಜೀವನ ಸಾಗಿಸಿಕೊಂ ಡು ಬರುತ್ತಿರುವ ಅವರು ಕಚೇರಿಗೆ ಐದಾರು ಬಾರಿ ಅರ್ಜಿ ಕೊಟ್ಟರೂ ಈ ವಿಚಾರವಾಗಿ ಯಾವುದೇ ರೀತಿ ಕ್ರಮ ಕೈ ಗೊಂಡಿರುವುದಿಲ್ಲ ಎಂದು ತಿಳಿಸಿದರು.
ಕೂಡಲೇ ತಾಲ್ಲೂಕು ಆಡಳಿತ ಪರಿಶಿಷ್ಟ ಜನಾಂಗದ ಪಾರ್ವತಮ್ಮರಿಗೆ ಜಮೀನನ್ನು ಮಂ ಜೂರು ಮಾಡಿ ಸಾಗುವಳಿ ಹಾಗೂ ಪಹಣಿಯನ್ನು ತುರ್ತಾಗಿ ಮಾಡಿಕೊಡಬೇಕು. ಸಂಕಷ್ಟದಲ್ಲಿರುವ ಆ ಕುಟುಂಬಕ್ಕೆ ನ್ಯಾಯ ಒದಗಿಸದಿದ್ದಲ್ಲಿ ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಅಶೋಕ್ ರಾಜರತ್ನಂ, ಸಂಘಟನೆ ಸಂಚಾಲಕ ಎಚ್.ಎಸ್.ಪುಟ್ಟಸ್ವಾಮಿ, ಮುಖಂಡರಾದ ನಾಗರಾಜ್, ದಿವಾಕರ್, ಎಚ್.ಕೆ.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.