ಜಿಲ್ಲೆ

ಕುಡಿದು ಕಾರು ಚಲಾಯಿಸಿದ ನೀರಾವರಿ ಇಂಜಿನಿಯರ್‌, ಮೃತರಾದ ಬಿಎಸ್‌ಎನ್‌ಎಲ್‌ ನಿವೃತ್ತ ಉದ್ಯೋಗಿ

reportermng

ಮೃತ ಆನಂದ್‌ ಅವರು ಪತ್ನಿಯೊಂದಿಗೆ ವಾಸಿಸುತ್ತಿದ್ದು ಅವರಿಗೆ ಮಕ್ಕಳಿಲ್ಲ, ಪತ್ನಿ ಲಲಿತಾ ಕೂಡಾ ಅನಾರೋಗ್ಯಪೀಡಿತರಾಗಿದ್ದು ಪತಿಯ ಸಾವಿನಿಂದ ಆಘಾತಕ್ಕೊಳಗಾಗಿದ್ದಾರೆ.

ತೀವ್ರ ಸ್ವರೂಪದ ಗಾಯಗಳಿಂದ ಆನಂದ್‌ ಮೃತಪಟ್ಟಿದ್ದಾರೆ. ಪೊಲೀಸರು ಕಾರನ್ನು ನಿಲ್ಲಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಆಗಿರುವ ಷಣ್ಮುಗಂ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ನಡೆಸಿರುವುದಾಗಿ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರಿನ ಕದ್ರಿ ಸರ್ಕ್ಯುಟ್‌ ಹೌಸ್‌ ಬಳಿ ರಾತ್ರಿ ಸುಮಾರು ೧೦ ಗಂಟೆಗೆ ಈ ದುರ್ಘಟನೆ ನಡೆದಿದೆ. ಮೃತರನ್ನು ಮಂಗಳೂರು ಲೇಡಿಹಿಲ್‌ ಬಿಎಸ್‌ಎನ್‌ಎಲ್‌ ಸ್ಟಾಫ್‌ ಕ್ವಾರ್ಟರ್ಸ್‌ ನಿವಾಸಿ ಆನಂದ್(‌೬೨) ಎಂದು ಗುರುತಿಸಲಾಗಿದೆ. ಇವರು ಮೂಲತಃ ಚಿಕ್ಕಮಗಳೂರಿನ ಹಸಹಳ್ಳಿ ಪೇಟೆಯ ಗಾಳಿಪೇಟೆಯವರು. ಮಂಗಳೂರಿನ ಬಿಎಸ್‌ಎನ್‌ಎಲ್‌ನಲ್ಲಿ ತಾಂತ್ರಿಕ ವಿಭಾಗದಲ್ಲಿ ಸೇವೆ ನಿರ್ವಹಿಸಿ ನಿವೃತ್ತರು. ಯಾವುದೋ ಕೆಲಸಕ್ಕೆಂದು ಉಡುಪಿಗೆ ಹೋದವರು ಮರಳಿ ಬಂದು ಬಸ್ಸಿಳಿದು ನಡೆದು ಕೊಂಡು ಬರುತ್ತಿರುವಾಗ ಕಾರೊಂದು ಅತಿವೇಗದಿಂದ ಬಂದು ಅವರಿಗೆ ಡಿಕ್ಕಿಯಾಗಿದೆ.

ಮಂಗಳೂರು: ಕುಡಿದ ಮತ್ತಿನಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬ ಬೇಕಾಬಿಟ್ಟಿ ಕಾರು ಚಲಾಯಿಸಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಬಿಎಸ್‌ಎನ್‌ಎಲ್‌ ನಿವೃತ್ತ ಅಧಿಕಾರಿಯೊಬ್ಬರಿಗೆ ಡಿಕ್ಕಯಾಗಿ ಅವರ ಸಾವಿಗೆ ಕಾರಣನಾದ ಘಟನೆ ಮಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ.

ನೀರಾವರಿ ಎಇಇ ಷಣ್ಮುಗಂ
ಮೃತ ಆನಂದ್